ಜಮ್ಮು: ಬಿಎಸ್‌ಎಫ್‌ನಿಂದ ಶಂಕಿತ ಗಡಿ ನುಸುಳುಕೋರನ ಹತ್ಯೆ

Update: 2021-02-08 17:32 GMT

ಜಮ್ಮು/ಹೊಸದಿಲ್ಲಿ, ಫೆ. 8: ಜಮ್ಮುವಿನ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ ಪಾಕಿಸ್ತಾನದ ಶಂಕಿತ ನುಸುಳುಕೋರನೋರ್ವನನ್ನು ಗುಂಡು ಹಾರಿಸಿ ಹತ್ಯೆಗೈದಿದೆ. ಸಾಂಬಾ ವಲಯದ ಚಾಕ್ ಫಕೀರ ಗಡಿ ಠಾಣೆಯ ಸಮೀಪದ ಪ್ರದೇಶದಲ್ಲಿ ಬೆಳಗ್ಗೆ 9.45ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

‘‘ಪುನರಾವರ್ತಿತ ಎಚ್ಚರಿಕೆಯ ಹೊರತಾಗಿಯೂ ಗಡಿ ಬೇಲಿಯತ್ತ ಒಳನುಸುಳುಕೋರರು ಸಂಚರಿಸುತ್ತಿದ್ದಾರೆ’’ ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ. ಭಾರತೀಯ ಭಾಗದಲ್ಲಿರುವ ಅಂತಾರಾಷ್ಟ್ರೀಯ ಗಡಿಯ 40 ಮೀಟರ್ ದೂರದಲ್ಲಿ ಪಾಕಿಸ್ತಾನದ ಒಳನುಸುಳುಕೋರನ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಕರೋಲ್ ಕೃಷ್ಣಾ ಹೊರ ಠಾಣೆ ಪ್ರದೇಶದ ಗಡಿಯಾದ್ಯಂತ ರವಿವಾರ ರಾತ್ರಿ 10.30ರ ಸುಮಾರಿಗೆ ಗಡಿಯಾಚೆಯಿಂದ ಗುಂಡಿನ ದಾಳಿ ನಡೆಸಲಾಗಿದೆ. ಇದಕ್ಕೆ ಗಡಿ ಭದ್ರತಾ ಪಡೆ ಸೂಕ್ತ ಪ್ರತ್ಯುತ್ತರ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News