ಮೆಟ್ಟಿಲಿನಿಂದ ಬಿದ್ದು ಮಹಿಳೆ ಮೃತ್ಯು

Update: 2021-02-10 16:28 GMT

ಮಲ್ಪೆ, ಫೆ.10: ಮೆಟ್ಟಿಲಿನಿಂದ ಜಾರಿ ಬಿದ್ದು ಮಹಿಳೆಯೊಬ್ಬರು ಮೃತ ಪಟ್ಟ ಘಟನೆ ಫೆ.9ರಂದು ಬೆಳಗ್ಗೆ ತೆಂಕನಿಡಿಯೂರು ಗ್ರಾಮದ ತೊಟ್ಟಂ ಎಂಬಲ್ಲಿ ನಡೆದಿದೆ.

ಮೃತರನ್ನು ತೊಟ್ಟಂ ನಿವಾಸಿ ಸುಮತಿ ಭಟ್(56) ಎಂದು ಗುರುತಿಸ ಲಾಗಿದೆ. ಇವರು ಹಾಸಿಗೆಯನ್ನು ಮನೆಯ ಮಹಡಿಯ ಮೇಲೆ ಇಡಲು ಮೆಟ್ಟಿಲು ಹತ್ತುವಾಗ ಅಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಖಾಸಗಿ ಆಸ್ಪತ್ರೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News