×
Ad

ಐಎನ್‌ಎಸ್ ವಿರಾಟ್ ಹಡಗು ಒಡೆಯುವ ಪ್ರಕ್ರಿಯೆಗೆ ಸುಪ್ರೀಂ ತಡೆಯಾಜ್ಞೆ

Update: 2021-02-10 23:41 IST

ಹೊಸದಿಲ್ಲಿ, ಫೆ.10: ಭಾರತೀಯ ನೌಕಾಪಡೆಯಲ್ಲಿ ಸುದೀರ್ಘ ಅವಧಿ ಸೇವೆ ಸಲ್ಲಿಸಿ ಬಳಿಕ ಸೇವೆಯಿಂದ ಮುಕ್ತಗೊಳಿಸಲಾಗಿದ್ದ ವಿಮಾನವಾಹಕ ನೌಕೆ ಐಎನ್‌ಎಸ್ ವಿರಾಟ್ ಹಡಗನ್ನು ಒಡೆಯುವ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿರುವ ಸುಪ್ರೀಂಕೋರ್ಟ್, ಕೇಂದ್ರ ಸರಕಾರ ಹಾಗೂ ಇತರರಿಗೆ ನೋಟಿಸ್ ರವಾನಿಸಿದೆ.

ಐಎನ್‌ಎಸ್ ವಿರಾಟ್ ನೌಕೆ ಭಾರತೀಯ ನೌಕಾಪಡೆಯಲ್ಲಿ 29 ವರ್ಷ ಸೇವೆಯಲ್ಲಿತ್ತು. 2017ರ ಮಾರ್ಚ್‌ನಲ್ಲಿ ಸೇವೆಯಿಂದ ಮುಕ್ತಗೊಳಿಸಿದ ಬಳಿಕ ಹಡಗನ್ನು ಒಡೆಯುವ ಕುರಿತು ನೌಕಾಪಡೆಯೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬಂದಿರುವುದಾಗಿ 2019ರ ಜುಲೈಯಲ್ಲಿ ಸರಕಾರ ಸಂಸತ್ತಿನಲ್ಲಿ ಹೇಳಿಕೆ ನೀಡಿತ್ತು.

ಆದರೆ ಹಡಗನ್ನು ಒಡೆಯದೆ, ಅದನ್ನು ಮ್ಯೂಸಿಯಂ ಆಗಿ ಸಂರಕ್ಷಿಸಿಡಬೇಕು ಎಂದು ಕೋರಿ ಸಂಸ್ಥೆಯೊಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪ್ರತಿಕ್ರಿಯಿಸುವಂತೆ ತಿಳಿಸಿ ಕೇಂದ್ರ ಸರಕಾರ ಹಾಗೂ ಇತರರಿಗೆ ನೋಟಿಸ್ ಜಾರಿ ಮಾಡಿತಲ್ಲದೆ, ಹಡಗು ಒಡೆಯುವ ಪ್ರಕ್ರಿಯೆಗೆ ತಡೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News