‘ಕೂ’ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಸೋರಿಕೆ ಆರೋಪ: ಸಿಇಒ ಸ್ಪಷ್ಟನೆ
Update: 2021-02-11 22:47 IST
ಹೊಸದಿಲ್ಲಿ, ಫೆ.11: ಭಾರತೀಯ ಭಾಷೆಗಳಲ್ಲಿ ಟ್ವಿಟರ್ ರೀತಿಯ ಅನುಭವ ನೀಡುವ ಮೈಕ್ರೊಬ್ಲಾಗಿಂಗ್ ಆ್ಯಪ್ ‘ಕೂ’ದಲ್ಲಿ ಬಳಕೆದಾರರ ಮಾಹಿತಿ ಸುಲಭವಾಗಿ ಸೋರಿಕೆಯಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ‘ಕೂ’ ಸಹಸಂಸ್ಥಾಪಕ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ ಸ್ಪಷ್ಟನೆ ನೀಡಿದ್ದಾರೆ.
ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಸುದ್ದಿಯನ್ನು ಅನಗತ್ಯವಾಗಿ ಪ್ರಸಾರ ಮಾಡಲಾಗುತ್ತಿದೆ. ‘ಕೂ’ ಪ್ರೊಫೈಲ್‌ನಲ್ಲಿ ಬಳಕೆದಾರರು ಸ್ವಇಚ್ಛೆಯಿಂದ ಪ್ರದರ್ಶಿಸುವ ಮಾಹಿತಿ ಇತರರಿಗೆ ಗೋಚರಿಸುತ್ತದೆ. ಇದನ್ನು ಮಾಹಿತಿ ಸೋರಿಕೆ ಎಂದು ಹೇಳುವಂತಿಲ್ಲ ಎಂದು ರಾಧಾಕೃಷ್ಣ ಹೇಳಿದ್ದಾರೆ.