×
Ad

ಪ್ರಧಾನಿ ಮೋದಿ ಓರ್ವ ಹೇಡಿ, ಅವರಿಗೆ ಚೀನಾದ ವಿರುದ್ಧ ನಿಲ್ಲಲು ಸಾಧ್ಯವಾಗುತ್ತಿಲ್ಲ: ರಾಹುಲ್‌ ಗಾಂಧಿ ಆಕ್ರೋಶ

Update: 2021-02-12 11:33 IST

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಓರ್ವ ಹೇಡಿ. ಅವರಿಗೆ ಚೀನಾದ ವಿರುದ್ಧ ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ದಿಲ್ಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, ಭಾರತದ ಭೂಪ್ರದೇಶವನ್ನು ರಕ್ಷಿಸುವ ಜವಾಬ್ದಾರಿಯನ್ನು ಪ್ರಧಾನಿ ಈಡೇರಿಸಿಲ್ಲ.ಅದರ ಬದಲಿಗೆ ಚೀನಾಕ್ಕೆ ಭೂಪ್ರದೇಶವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿಯವರು ಚೀನೀಯರಿಗೆ ಸಡ್ಡುಹೊಡೆಯಲು ಸಾಧ್ಯವಿಲ್ಲದ ಹೇಡಿ. ಅವರು ನಮ್ಮ ಸೈನ್ಯದ ತ್ಯಾಗವನ್ನು ವ್ಯರ್ಥ ಮಾಡುತ್ತಿದ್ದಾರೆ. ಅವರು ನಮ್ಮ ಸೈನಿಕರ ತ್ಯಾಗಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಭಾರತದಲ್ಲಿ ಯಾರೂ ಅದನ್ನು ಅನುಮತಿಸಬಾರದು ಎಂದು ಗಾಂಧಿ ಆಗ್ರಹಿಸಿದರು.

ಪೂರ್ವ ಲಡಾಖ್ ನ ಪಂಗೋಂಗ್ ಸರೋವರದ ಉತ್ತರ ಹಾಗೂ ದಕ್ಷಿಣ ದಂಡೆಯನ್ನು ಬೇರ್ಪಡಿಸುವ ಬಗ್ಗೆ ಭಾರತ ಹಾಗೂ ಚೀನಾ ಒಪ್ಪಂದ ಮಾಡಿಕೊಂಡ ನಂತರ ರಾಹುಲ್ ಈ ಹೇಳಿಕೆ ನೀಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News