ಟ್ವಿಟರ್‌ ಮತ್ತು ಕೇಂದ್ರ ಸರಕಾರಕ್ಕೆ ನೋಟಿಸ್‌ ನೀಡಿದ ಸುಪ್ರೀಂ ಕೋರ್ಟ್

Update: 2021-02-12 06:36 GMT

ನವದೆಹಲಿ: ಟ್ವಿಟರ್ ಮತ್ತು ಇತರ ಸಾಮಾಜಿಕ ತಾಣ ವೇದಿಕೆಗಳಲ್ಲಿ ನಕಲಿ ಸುದ್ದಿ, ದ್ವೇಷದ ಸಂದೇಶಗಳು ಮತ್ತು  ದೇಶದ್ರೋಹಿ ವಿಚಾರಗಳನ್ನು ಪರಿಶೀಲಿಸುವ ವ್ಯವಸ್ಥೆ ಕೋರಿ ಸಲ್ಲಿಸಿರುವ ಅರ್ಜಿಯ ಸಲುವಾಗಿ ಸುಪ್ರೀಂ ಕೋರ್ಟ್ ಇಂದು ಸರ್ಕಾರ ಮತ್ತು ಟ್ವಿಟರ್‌ಗೆ ನೋಟಿಸ್ ನೀಡಿದೆ ಎಂದು ತಿಳಿದು ಬಂದಿದೆ.

ಬಿಜೆಪಿ ಮುಖಂಡ ವಿನೀತ್ ಗೋಯೆಂಕಾ ಕಳೆದ ವರ್ಷ ಮೇ ತಿಂಗಳಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಟ್ವಿಟರ್ ನಲ್ಲಿ ಹಲವು ನಕಲಿ ಖಾತೆಗಳಿದ್ದು,  ನಕಲಿ ಸುದ್ದಿ ಮತ್ತು ಪ್ರಚೋದಕ ಸಂದೇಶಗಳ ಮೂಲಕ ದ್ವೇಷವನ್ನು ಹರಡುವ ಜಾಹೀರಾತುಗಳನ್ನು ಸಮರ್ಪಕವಾಗಿ ಪರಿಶೀಲಿಸುವ ವ್ಯವಸ್ಥೆಯನ್ನು ಕೋರಿ ಅರ್ಜಿ ಸಲ್ಲಿಸಿದ್ದರು.

ಪ್ರಖ್ಯಾತ ವ್ಯಕ್ತಿಗಳು ಮತ್ತು ಗಣ್ಯರ ಹೆಸರಿನಲ್ಲಿ ನೂರಾರು ನಕಲಿ ಟ್ವಿಟರ್ ಹ್ಯಾಂಡಲ್‌ಗಳು ಮತ್ತು ಫೇಸ್‌ಬುಕ್ ಖಾತೆಗಳಿವೆ. ಈ ಕುರಿತಾದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ವಿಶೇಷವಾಗಿ ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳು "ವಿರೋಧಿಗಳ ಚಿತ್ರಣವನ್ನು ಕೆಡಿಸಲು" ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸಿಕೊಂಡಿವೆ ಎಂದು ಅರ್ಜಿದಾರ ಬಿಜೆಪಿ ನಾಯಕ ಹೇಳಿಕೆ ನೀಡಿದ್ದಾಗಿ ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News