ಗುಜರಾತ್ ಸ್ಥಳೀಯಾಡಳಿತ ಚುನಾವಣೆ: ಭರೂಚ್ ‌ನಲ್ಲಿ 31 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಿಜೆಪಿ

Update: 2021-02-12 17:50 GMT

ಗಾಂಧಿನಗರ, ಫೆ. 12: ಗುಜರಾತ್‌ನಲ್ಲಿ ಫೆಬ್ರವರಿ 28ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಭರೂಚ್ ಜಿಲ್ಲೆಯಲ್ಲಿ 31ಕ್ಕೂ ಅಧಿಕ ಮುಸ್ಲಿಂ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಿದೆ.

ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಅತ್ಯಧಿಕ ಅಭ್ಯರ್ಥಿಗಳನ್ನು ಪಕ್ಷ ಕಣಕ್ಕಿಳಿಸುತ್ತಿರುವುದು ಇದು ಮೊದಲನೇ ಬಾರಿ ಎಂದು ಜಿಲ್ಲಾ ಬಿಜೆಪಿ ವರಿಷ್ಠ ಮಾರುತಿ ಸಿನ್ಹಾ ಅತೋದಾರಿಯ ತಿಳಿಸಿದ್ದಾರೆ. ಆದರೆ, ಪ್ರತಿಸ್ಪರ್ಧಿ ಭಾರತೀಯ ಟೈಬಲ್ ಪಾರ್ಟಿ (ಬಿಟಿಪಿ) ಹಾಗೂ ಅಸಸುದ್ದೀನ್ ಉವೈಸಿ ಅವರ ಎಐಎಂಐಎಂ ಮೈತ್ರಿಗೂ ಈ ನಡೆಗೂ ಸಂಬಂಧ ಇರುವುದನ್ನು ಅವರು ನಿರಾಕರಿಸಿದ್ದಾರೆ. ಭರೂಚ್ ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಮುಸ್ಲಿಮರು ಇದ್ದಾರೆ. ಇಲ್ಲಿ ಜಿಲ್ಲಾ ಪಂಚಾಯತ್, 9 ತಾಲೂಕು ಪಂಚಾಯತ್ ಹಾಗೂ 4 ನಗರ ಸಭೆಗಳಿಗೆ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News