ಮುನವ್ವರ್ ಫಾರೂಕಿ ಪ್ರಕರಣ: ವ್ಯಾಸ್, ಅಂಥೋನಿಗೆ ಹೈಕೋರ್ಟ್ ಜಾಮೀನು

Update: 2021-02-12 17:55 GMT

ಭೋಪಾಲ, ಫೆ.12: ತಮ್ಮ ಕಾರ್ಯಕ್ರಮದಲ್ಲಿ ಹಿಂದು ದೇವತೆಗಳಿಗೆ ಅಪಹಾಸ್ಯ ಮಾಡಿದ ಆರೋಪದಲ್ಲಿ ಕಾಮಿಡಿಯನ್ ಮುನವ್ವರ್ ಫಾರೂಕಿ ಜತೆ ಬಂಧಿತರಾಗಿದ್ದ ಪ್ರಖರ್ ವ್ಯಾಸ್ ಮತ್ತು ಎಡ್ವಿನ್ ಅಂಥೋನಿಗೆ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠ ಮಧ್ಯಂತರ ಜಾಮೀನು ಮಂಜೂರುಗೊಳಿಸಿದೆ. ಧಾರ್ಮಿಕ ಭಾವನೆಗಳಿಗೆ ಘಾಸಿ ಎಸಗಿದ ಆರೋಪದಲ್ಲಿ ಫಾರೂಕಿ, ವ್ಯಾಸ್, ಅಂಥೋನಿ, ನಳಿನ್ ಯಾದವ್ ಮತ್ತು ಪ್ರಿಯಮ್ ವ್ಯಾಸ್‌ರನ್ನು ಇಂದೋರ್‌ನಲ್ಲಿ ಜನವರಿ 1ರಂದು ಬಂಧಿಸಲಾಗಿದೆ. ಇವರಲ್ಲಿ ಫಾರೂಕಿ ಹಾಗೂ ಅಪ್ರಾಪ್ತ ವಯಸ್ಕನಾದ ಪ್ರಿಯಮ್ ವ್ಯಾಸ್ ಈಗಾಗಲೇ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.

ಫಾರೂಕಿ ಹಾಗೂ ಇತರರ ಬಗ್ಗೆ ದೂರು ನೀಡಿದ್ದ ‘ಹಿಂದು ರಕ್ಷಕ ಸಂಘಟನೆ’ಯ ಮುಖ್ಯಸ್ಥ ಏಕಲವ್ಯ ಸಿಂಗ್ ಗೌರ್ ಬಗ್ಗೆ ಫಾರೂಕಿಯ ಸ್ನೇಹಿತ ಸದಾಖತ್ ಖಾನ್ ನಿಂದಾತ್ಮಕ ಹೇಳಿಕೆ ನೀಡಿದ್ದಾರೆಂಬ ಆರೋಪದಲ್ಲಿ ಸದಾಖತ್ ಖಾನ್‌ರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಜಾಮೀನು ಕೋರಿ ಸದಾಖತ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News