×
Ad

ತಮಿಳುನಾಡಿನ ಬಳಿಕ ಕೇರಳದಾದ್ಯಂತ ʼಪೋ ಮೋನೆ ಮೋದಿʼ ಟ್ರೆಂಡಿಂಗ್

Update: 2021-02-13 23:23 IST

ಕೊಚ್ಚಿ: ಫೆ.14ರಂದು ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದು, ಕಳೆದೆರಡು ದಿನಗಳಿಂದ ಗೋ ಬ್ಯಾಕ್ ಮೋದಿ ಎಂಬ ಹ್ಯಾಶ್ ಟ್ಯಾಗ್ ಟ್ವಿಟರ್ ನಾದ್ಯಂತ ಟ್ರೆಂಡಿಂಗ್ ಆಗಿತ್ತು. ರೈತರ ಪ್ರತಿಭಟನೆಗೆ ಯಾವುದೇ ಸ್ಪಂದನೆ ನೀಡದ ಪ್ರಧಾನಿಯನ್ನು ನಾವು ನಂಬುವುದಿಲ್ಲ ಎಂದು ಹಲವು ಬಳಕೆದಾರರು ಟ್ವೀಟ್ ಮಾಡಿದ್ದರು. ಇದೀಗ ಅದರ ಬೆನ್ನಲ್ಲೇ 'ಪೋ ಮೋನೆ ಮೋದಿ' ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

ತಮಿಳುನಾಡಿನಲ್ಲಿ ಕಾರ್ಯಕ್ರಮ ಮುಗಿದ ಬಳಿಕ ಪ್ರಧಾನಿ ಮೋದಿ ಕೊಚ್ಚಿ ಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ತಮಿಳರ ಗೋ ಬ್ಯಾಕ್ ಮೋದಿಯ ಬೆನ್ನಲ್ಲೇ 'ಪೋ ಮೋನೆ ಮೋದಿ' ಟ್ರೆಂಡಿಂಗ್ ಆಗಿದೆ. "ಈ ಹಿಂದೆ ಪ್ರಧಾನಿ ಮೋದಿ ಕೇರಳವನ್ನು ಸೋಮಾಲಿಯಕ್ಕೆ ಹೋಲಿಸಿದ್ದರು. ಇದನ್ನು ನಾವು ಮರೆಯುವುದಿಲ್ಲ" ಎಂದು ಬಳಕೆದಾರರೋರ್ವರು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News