ಕಾರಾಗೃಹದಲ್ಲಿದ್ದ ದಿಲ್ಲಿ ವಿ.ವಿ. ಮಾಜಿ ಪ್ರಾದ್ಯಾಪಕ ಜಿ.ಎನ್. ಸಾಯಿಬಾಬಾಗೆ ಕೊರೋನ ಸೋಂಕು

Update: 2021-02-13 18:41 GMT

ಹೊಸದಿಲ್ಲಿ, ಫೆ. 13: ಮಾವೋವಾದಿ ನಂಟಿನ ಆರೋಪದಲ್ಲಿ ನಾಗಪುರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ದಿಲ್ಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರಾದ್ಯಾಪಕ ಜಿ.ಎನ್. ಸಾಯಿಬಾಬಾ ಅವರಿಗೆ ಕೊರೋನ ಸೋಂಕು ತಗಲಿದೆ ಎಂದು ಕಾರಾಗೃಹದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಅವರೊಂದಿಗೆ ಕಾರಾಗೃಹದಲ್ಲಿದ್ದ ಇತರ ಮೂವರಿಗೂ ಕೊರೋನ ಸೋಂಕು ತಗಲಿದೆ ಎಂದು ಅವರು ತಿಳಿಸಿದ್ದಾರೆ.

‘‘ಜಿ.ಎನ್. ಸಾಯಿಬಾಬಾ ಅವರ ಕೊರೋನ ವರದಿ ಪಾಸಿಟಿವ್ ಬಂದಿದೆ. ಅವರಿಗೆ ಸಿಟಿ ಸ್ಕಾನ್ ಹಾಗೂ ಇತರ ಪರೀಕ್ಷೆಗಳನ್ನು ನಡೆಸಲಾಗುವುದು. ನಂತರ ಚಿಕಿತ್ಸೆಗೆ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ವರ್ಗಾಯಿಸುವ ಬಗ್ಗೆ ನಿರ್ಧರಿಸಲಾಗುವುದು’’ ಎಂದು ಕಾರಾಗೃಹದ ಅಧೀಕ್ಷಕ ಅನೂಪ್ ಕುಮಾರ್ ಹೇಳಿದ್ದಾರೆ.

ಈ ವಾರದ ಆರಂಭದಲ್ಲಿ ನಾಗಪುರ ಕಾರಾಗೃಹದಲ್ಲಿರುವ ಭೂಗತ ಪಾತಕಿ ಅರುಣ್ ಗಾವ್ಳಿ ಹಾಗೂ ಇತರ ನಾಲ್ವರಿಗೆ ಕೊರೋನ ಸೋಂಕು ದೃಢಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News