×
Ad

"ಅವರು ಮನೆಯಲ್ಲಿದ್ದರೆ ಸಾಯುತ್ತಿರಲಿಲ್ಲವೇ?": ಪ್ರತಿಭಟನಾ ಸ್ಥಳದಲ್ಲಿ ರೈತರ ಸಾವು ಕುರಿತು ಬಿಜೆಪಿ ಮುಖಂಡ ಹೇಳಿಕೆ

Update: 2021-02-14 12:38 IST

ಚಂಡೀಗಢ: ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ರೈತರು ಸಾವನ್ನಪ್ಪಿದ ಕುರಿತಾದಂತೆ ವಿವಾದಾತ್ಮಕ ಹೇಳಿಕೆ ನೀಡಿರುವ ಹರಿಯಾಣ ಕೃಷಿ ಸಚಿವ ಜೆ.ಪಿ. ದಲಾಲ್ ಅವರು, "ಮನೆಗೆ ಮರಳಿದ್ದರೂ ಸಹ ಅವರು ಸಾಯುತ್ತಿದ್ದರು" ಎಂದು ಹೇಳಿದ್ದಾರೆ. ಈ ಕುರಿತಾದಂತೆ ಸಾಮಾಜಿಕ ತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಅವರು ಕ್ಷಮೆಯಾಚಿಸಿದ್ದಾರೆ ಎಂದು ತಿಳಿದು ಬಂದಿದೆ.

ʼ200 ರೈತರ ಸಾವುʼ ಕುರಿತು ವರದಿಗಾರರ ಪ್ರಶ್ನೆಗೆ ಉತ್ತರವಾಗಿ ದಲಾಲ್ ಅವರು ಹರಿಯಾಣದ ಭಿವಾನಿ ಯಲ್ಲಿ ಈ ಹೇಳಿಕೆ ನೀಡಿದ್ದಾರೆ.

"ಅವರು ಮನೆಯಲ್ಲಿದ್ದರೆ ಅವರು ಸಾಯುತ್ತಿರಲಿಲ್ಲವೇ? ಅವರು ತಮ್ಮ ಮನೆಯಲ್ಲಿದ್ದರೆ ಅವರು ಅಲ್ಲಿಯೂ ಸಾಯುತ್ತಿದ್ದರು. ಒಂದರಿಂದ ಎರಡು ಲಕ್ಷ ಜನರಲ್ಲಿ ಆರು ತಿಂಗಳಲ್ಲಿ 200 ಜನರು ಸಾಯುವುದಿಲ್ಲವೇ?" ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

"ಯಾರೋ ಒಬ್ಬರು ಹೃದಯಾಘಾತದಿಂದ ಸಾಯುತ್ತಿದ್ದಾರೆ ಮತ್ತು ಯಾರಾದರೂ ಅನಾರೋಗ್ಯಕ್ಕೆ ಒಳಗಾದ ನಂತರ ಸತ್ತರು. ಇನ್ನು ಕೆಲವರು ತಮ್ಮ ಸ್ವಂತ ಇಚ್ಛೆಯೊಂದಿಗೆ ಸತ್ತರು. ಅವರ ಬಗ್ಗೆ ನನ್ನ ಆಳವಾದ ಸಹಾನುಭೂತಿ ಇದೆ" ಎಂದು ದಲಾಲ್ ಹೇಳಿಕೆ ನೀಡಿದ್ದಾರೆ.

ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ, ಹರಿಯಾಣ ಕೃಷಿ ಸಚಿವರು ಸಾಮಾಜಿಕ ಮಾಧ್ಯಮಗಳಲ್ಲಿ "ತಿರುಚಿದ" ಹೇಳಿಕೆಗಳನ್ನು ಪ್ರಕಟಿಸಿದ್ದಾರೆ ಎಂದು ಹೇಳಿದರು. ಅವರ ಹೇಳಿಕೆಗಳಿಗೆ "ತಪ್ಪು ಅರ್ಥ" ನೀಡಲಾಗಿದೆ ಎಂದೂ ಅವರು ಹೇಳಿದರು.

"ಇದರಿಂದ ಯಾರಿಗಾದರೂ ತೊಂದರೆಯಾದರೆ, ನಾನು ಕ್ಷಮೆಯಾಚಿಸುತ್ತೇನೆ" ಎಂದು ಅವರು ಹೇಳಿದ್ದು, ಅರೈತರ ಕಲ್ಯಾಣಕ್ಕಾಗಿನಾನು ಇನ್ನು ಮುಂದೆಯೂ ಕೆಲಸ ಮಾಡುತ್ತೇನೆ. ಯಾರಾದರೂ ಸತ್ತರೆ ನೋವಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News