ರೈತ ಪ್ರತಿಭಟನೆ ಬೆಂಬಲಿಸಿ ಅನಿವಾಸಿ ಸಂಘಟನೆಗಳಿಂದ ಗುಲಾಬಿ ಅಭಿಯಾನ

Update: 2021-02-14 17:18 GMT

 ಲಂಡನ್,ಫೆ.14: ಭಾರತದಲ್ಲಿ ನೂತನ ಕೃಷಿ ಕಾನೂನುಗ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಬ್ರಿಟನ್‌ನಲ್ಲಿನ ಅನಿವಾಸಿ ಭಾರತೀಯ ಸಂಘಟನೆಗಳ ಗುಂಪೊಂದು ‘ಗುಲಾಬಿ’ ಅಭಿಯಾನವನ್ನು ರವಿವಾರ ಆರಂಭಿಸಿದೆ.

 ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಲುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮಾಡುವ ಮೂಲಕ ಅಥವಾ ಆಯಾ ಪ್ರಾಂತದಲ್ಲಿರುವ ಭಾರತೀಯ ರಾಯಭಾರಿ ಕಚೇರಿ/ಕಾನ್ಸುಲ್ ಜನರಲ್‌ಗೆೆ ಗುಲಾಬಿ ಹೂ’ಗಳನ್ನು ಕಳುಹಿಸುವಂತೆ ಗ್ಲೋಬಲ್ ಇಂಡಿಯನ್ ಪ್ರೋಗ್ರೆಸಿವ್ ಡಯಾಸ್ಪೋರಾ (ಜಿಐಪಿಡಿ) ಸಂಘಟನೆಯು #Rose2repeal#LoveTofarmers#oneAppealRepeal ಹ್ಯಾಶ್‌ಟ್ಯಾಗ್‌ನೊಂದಿಗೆ ಕರೆ ನೀಡಿದೆ.

 ದ್ವೇಷವನ್ನು ಪ್ರೀತಿಯು ಗೆಲ್ಲುತ್ತದೆ ಅಭಿಯಾನದ ಭಾಗವಾಗಿ ಕೃಷಿ ಕಾಯ್ದೆಯ ನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಭಾರತೀಯ ರಾಯಭಾರಿ ಕಚೇರಿಗಳಿಗೆ ಜಿಐಪಿಡಿ ಪತ್ರವನ್ನು ಕೂಡಾ ಬರೆದಿದೆ.

 ಜಗತ್ತಿನಾದ್ಯಂತ ಹರಡಿರುವ ಪ್ರಗತಿಪಾರ ಭಾರತೀಯರು, 12ಕ್ಕೂ ಅನಿವಾಸಿ ಭಾರತೀಯ ಸಂಘಟನೆಗಳು ರೈತರ ಚಳವಳಿಗೆ ಹಾಗೂ ತಮ್ಮ ನ್ಯಾಯಯುತ ಬೇಡಿಕೆಯನ್ನು ಸರಕಾರ ಆಲಿಸಬೇಕೆಂಬ ಅವರ ಬೇಡಿಕೆಯನ್ನು ಬೆಂಬಲಿಸುತ್ತದೆ ಮತ್ತು ಕೃಷಿ ಕಾನೂನುಗಳ ರದ್ದತಿಗೆ ಕರೆ ನೀಡುತ್ತದೆ ಹಾಗೂ ಇಂತಹ ಕಾನೂನುಗಳನ್ನು ಮರುರೂಪಿಸುವಾಗ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಪತ್ರದಲ್ಲಿ ಆಗ್ರಹಿಸಿರುವುದಾಗಿ ಜಿಐಪಿಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News