ಮತ್ತೆ ಏರಿಕೆಯಾದ ಅಡುಗೆ ಅನಿಲ ಸಿಲಿಂಡರ್‌ ದರ: 50ರೂ. ಹೆಚ್ಚಳ

Update: 2021-02-14 19:00 GMT

ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ ₹ 50 ರಷ್ಟು ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ರಾಷ್ಟ್ರ ರಾಜಧಾನಿಯಲ್ಲಿ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯು 719ರೂ.ಯಿಂದ 769ರೂ.ಗೆ ಏರಿಕೆಯಾಗಲಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಫೆಬ್ರವರಿ ತಿಂಗಳಲ್ಲಿ ಇದು ಎರಡನೇ ಬೆಲೆ ಏರಿಕೆಯಾಗಿದೆ. ಈ ಮೊದಲು, ಸಬ್ಸಿಡಿ ರಹಿತ ಅನಿಲ ಬೆಲೆಗಳನ್ನು ನಾಲ್ಕು ಪ್ರಮುಖ ನಗರಗಳಲ್ಲಿ 25ರೂ. ಹೆಚ್ಚಳ ಮಾಡಲಾಗಿತ್ತು.

ತೈಲ ಮಾರುಕಟ್ಟೆ ಕಂಪನಿಗಳು ಸತತ ಆರನೇ ದಿನಕ್ಕೆ ಸುಮಾರು 30 ಪೈಸೆ ದರವನ್ನು ಹೆಚ್ಚಿಸಿದ ನಂತರ ಭಾನುವಾರ ನಾಲ್ಕು ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕೂಡಾ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಮುಂಬೈನಲ್ಲಿ, ಪರಿಷ್ಕೃತ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕ್ರಮವಾಗಿ ಲೀಟರ್‌ಗೆ. 95.21 ಮತ್ತು ಲೀಟರ್‌ಗೆ 86.04 ರಷ್ಟಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News