ಕಿನ್ಯ: 'ಆರೋಗ್ಯಕ್ಕಾಗಿ ಬೆಂಬಲ' ಕಾರ್ಯಕ್ರಮದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2021-02-14 18:59 GMT

ಮಂಗಳೂರು: ಕಿನ್ಯ ಗೋಲ್ಡನ್ ವೆಲ್ಫೇರ್ ಸೊಸೈಟಿ ಮತ್ತು ಯೆನೆಪೊಯ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ ಇವುಗಳ ಜಂಟಿ ಆಶ್ರಯದಲ್ಲಿ 'ಆರೋಗ್ಯಕ್ಕಾಗಿ ಬೆಂಬಲ' ಎಂಬ ನಿರಂತರ ಆರೋಗ್ಯ ಕಾರ್ಯಕ್ರಮದ ಅಂಗವಾಗಿ ಉಚಿತ ಕಣ್ಣು, ಕಿವಿ, ಮೂಗು ಮತ್ತು ಗಂಟಲು ತಪಾಸಣಾ ಶಿಬಿರ ರವಿವಾರ ಸಂಸ್ಥೆಯ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಿನ್ಯ ಜಮಾಅತ್ ಅಧ್ಯಕ್ಷ ಹಾಜಿ ಇಸ್ಮಾಯೀಲ್ ಚಾಯರವಳಚ್ಚಿಲ್ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ಹಾಜಿ ಮೂಸಾ ಅಬ್ಬಾಸ್ ಕುರಿಯಕ್ಕಾರ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಯೆನೆಪೊಯ ಆಯುರ್ವೇದ ವೈದ್ಯಕೀಯ ಕಾಲೇಜಿನ ವೈದ್ಯರಾದ ಡಾ. ಅಕ್ಷತಾ ಭಟ್, ಡಾ‌. ಸಂತೋಷ್ ಕೆ., ಉಚಿತ ವಾರದ ಚಿಕಿತ್ಸಾಲಯದ ವೈದ್ಯೆ ಡಾ. ಅಫ್ರಾ ಇಸ್ಮಾಯೀಲ್ ಹಾಗೂ ತೊಕ್ಕೋಟು ಮೆಡೋಕ್ ಪಾಲಿಕ್ಲಿನಿಕ್‌ನ ಮಾಲಕ ಝಿರಾರ್ ಅಬ್ದುಲ್ಲಾ ಕಾಸರಗೋಡು, ಭಾಗವಹಿಸಿದ್ದರು.

ಗೋಲ್ಡನ್ ವೆಲ್ಫೇರ್ ಸಮಸ್ಥೆಯ ಕಾರ್ಯದರ್ಶಿ ಅಬ್ದುಲ್ ಸಮದ್ ಕಿನ್ಯ ಸ್ವಾಗತಿಸಿ, ವಂದಿಸಿದರು.

ಶಿಬಿರದಲ್ಲಿ 72 ಶಿಬಿರಾರ್ಥಿಗಳ ತಪಾಸಣೆ ನಡೆಸಿ, ಮುಂದಿನ ಚಿಕಿತ್ಸೆಗಾಗಿ ಸಲಹೆ, ಸೂಚನೆಗಳನ್ನು ನೀಡಿ, ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News