ಸೆಂಚುರಿ ಬಾರಿಸುವತ್ತ ಪೆಟ್ರೋಲ್: ಸಾಮಾಜಿಕ ತಾಣದಾದ್ಯಂತ 'ಮೋದಿ ತೈಲ ಹಗರಣ' ಟ್ರೆಂಡಿಂಗ್

Update: 2021-02-15 11:30 GMT
photo: keralakaumudy

ಹೊಸದಿಲ್ಲಿ: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದ್ದು, ಕಳೆದ ಏಳು ದಿನಗಳಿಂದ ನಿರಂತರವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರುತ್ತಿದೆ. ರವಿವಾರ ಮಧ್ಯರಾತ್ರಿಯಿಂದ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 50ರೂ. ಹೆಚ್ಚಳವಾಗಿತ್ತು. ಮುಂಬೈನಲ್ಲಿ ಪೆಟ್ರೋಲ್ ದರವು 95ರೂ. ದಾಟಿದ್ದು, ಇನ್ನೇನು 100ರೂ. ಆಗುವತ್ತ ದಾಫುಗಾಲಿಡುತ್ತಿದೆ. ಈ ಕುರಿತಾದಂತೆ ಇದೀಗ ಸಾಮಾಜಿಕ ಜಾಲತಾಣದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, #ModiFuelScam ಎಂಬ ಹ್ಯಾಶ್‌ ಟ್ಯಾಗ್‌ ಟ್ರೆಂಡಿಂಗ್‌ ಆಗಿದೆ.

"ಪೆಟ್ರೋಲ್‌ ದರವು 100ಕ್ಕೆ ಇನ್ನೇನು ತಲುಪುತ್ತದೆ, ಗ್ಯಾಸ್‌ ಸಿಲಿಂಡರ್‌ ಬೆಲೆ ಈಗಾಗಲೇ 785ರೂ. ಆಗಿದೆ. ಕೆಲವರಿಗೆ ಕೆಲವಿಲ್ಲ. ಇನ್ನು ಕೆಲವರ ಸಂಬಳ ಕಡಿತವಾಗುತ್ತಿದೆ. ಪೆಟ್ರೋಲ್‌, ಗ್ಯಾಸ್‌ ಇಲ್ಲದೇ ನಗರ ಪ್ರದೇಶಗಳಲ್ಲಿ ಜೀವಿಸುವುದು ಕಷ್ಟಸಾಧ್ಯ. ಸರಕಾರ ಈ ಕುರಿತಾದಂತೆ ಏನೂ ಮಾತನಾಡುತ್ತಿಲ್ಲ, ಜೊತೆಗೆ ವಿರೋಧ ಪಕ್ಷವೂ ಮೌನವಾಗಿದೆ ಎಂದು ಬಳಕೆದಾರರೋರ್ವರು ಟ್ವೀಟಿಸಿದ್ದಾರೆ.

ಮೊದಲೇ ಆರ್ಥಿಕವಾಗಿ ಕುಸಿತ ಕಾಣುತ್ತಿರುವ ದೇಶದಲ್ಲಿ ಈಗಾಗಲೇ ಕೊರೋನ ಸಾಂಕ್ರಾಮಿಕದ ಕಾರಣದಿಂದ ಹಲವಾರು ಮಂದಿ ತಮ್ಮ ಕೆಲಸ ಕಳೆದುಕೊಂಡು ಶೋಚನೀಯ ಪರಿಸ್ಥಿತಿಯಲ್ಲಿದ್ದಾರೆ. ಈ ನಡುವೆ ಪೆಟ್ರೋಲ್‌ ಡೀಸೆಲ್‌ ಸೇರಿದಂತೆ ಅಗತ್ಯ ವಸ್ತುಗಳು ದುಬಾರಿಯಾಗುತ್ತಿವೆ. ಇದು ಸಾಮಾನ್ಯ ಜನರಿಗೆ ಹಿಂಸೆಯಾಗಿ ಮಾರ್ಪಟ್ಟಿದ್ದು, ಮೋದೀಜಿ ಭರವಸೆ ನೀಡಿದ್ದ ಅಚ್ಚೇದಿನ್‌ ಇದೇನಾ? ಎಂದು ಬಳಕೆದಾರರು ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News