ಶಿರ್ವ ಗ್ರಾಪಂ ಅಧ್ಯಕ್ಷ ಸ್ಥಾನ ಬಿಜೆಪಿ ತೆಕ್ಕೆಗೆ

Update: 2021-02-15 16:52 GMT
ಗ್ರೆಗೋರಿ ಕೊನ್ರಾಡ್ ಕ್ಯಾಸ್ತಲಿನೋ / ಗ್ರೇಸಿ ಕಾರ್ಡೋಜಾ

ಶಿರ್ವ, ಫೆ.15: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಶಿರ್ವ ಗ್ರಾಪಂ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಗ್ರೆಗೋರಿ ಕೊನ್ರಾಡ್ ಕ್ಯಾಸ್ತಲಿನೋ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಗ್ರೇಸಿ ಕಾರ್ಡೋಜಾ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಹುದ್ದೆಗಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರತನ್ ಕುಮಾರ್ ಶೆಟ್ಟಿ ಹಾಗೂ ಬಿಜೆಪಿ ಬೆಂಬಲಿತ ಪ್ರವೀಣ್ ಸಾಲ್ಯಾನ್ ಮತ್ತು ಕೊನ್ರಾಡ್ ಕ್ಯಾಸ್ತಲಿನೋ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಬೆಂಬಲಿತ 19 ಸದಸ್ಯರಿದ್ದರೂ ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿ ಗ್ರೆಗೋರಿ ಕೊನ್ರಾಡ್ ಕ್ಯಾಸ್ತಲಿನೋ ಆಯ್ಕೆಯಾದರು.

ಅಧ್ಯಕ್ಷರ ಚುನಾವಣೆಗೆ ಮೊದಲು ಬಿಜೆಪಿ ಪ್ರಮುಖರ ಸಮ್ಮುಖದಲ್ಲಿ 3 ಸದಸ್ಯರು ಬೆಂಬಗಲಿಗರೊಂದಿಗೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಕಳೆದ ಬಾರಿಯೂ ಕಾಂಗ್ರೆಸ್ಗೆ ಬಹುಮತವಿದ್ದರೂ ಬಿಜೆಪಿ ಬೆಂಬಲಿತೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News