×
Ad

ಧೋನಿ ಟೆಸ್ಟ್ ನಾಯಕತ್ವ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

Update: 2021-02-16 15:12 IST

ಚೆನ್ನೈ:ನಾಯಕ ವಿರಾಟ್ ಕೊಹ್ಲಿ ತಮ್ಮ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದು, ಈ ಬಾರಿ ಅವರು ಮಾಜಿ ನಾಯಕ ಎಂಎಸ್ ಧೋನಿಯ ಟೆಸ್ಟ್ ನಾಯಕತ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ 317 ರನ್ ಗಳಿಂದ ಜಯ ಸಾಧಿಸಿದ ಬಳಿಕ ಕೊಹ್ಲಿ ಈ ಸಾಧನೆ ಮಾಡಿದರು.

ಕೊಹ್ಲಿ ನಾಯಕನಾಗಿ 21ನೇ ಗೆಲುವು ಸಾಧಿಸಿ ಧೋನಿಯ ನಾಯಕತ್ವ ದಾಖಲೆಯನ್ನು ಸರಿದೂಗಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕನಾಗಲು ಇನ್ನೊಂದು ಪಂದ್ಯವನ್ನು ಗೆಲ್ಲಬೇಕಾಗಿದೆ.

ಆಲ್ ರೌಂಡ್ ಪ್ರದರ್ಶನ ನೀಡಿದ ಭಾರತವು 2ನೇ ಟೆಸ್ಟ್ ನಲ್ಲಿ 317 ರನ್ ಗೆಲುವು ದಾಖಲಿಸಿತು. ಅಕ್ಷರ್ ಪಟೇಲ್(5-60) ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಪಡೆದ ಭಾರತದ 9ನೇ ಬೌಲರ್ ಎನಿಸಿಕೊಂಡರು. ಆರ್.ಅಶ್ವಿನ್ ಕೊನೆಯ ಬಾರಿ ಈ ಸಾಧನೆ ಮಾಡಿದ್ದರು. 2011-12ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯದಲ್ಲಿ 47ಕ್ಕೆ 6 ವಿಕೆಟ್ ಗಳನ್ನು ಅಶ್ವಿನ್ ಪಡೆದಿದ್ದರು. 

ಭಾರತದಲ್ಲಿ ಟೆಸ್ಟ್ ನಾಯಕತ್ವದ ದಾಖಲೆಗಳು

ವಿರಾಟ್ ಕೊಹ್ಲಿ-ಪಂದ್ಯ 28,ಗೆಲುವು 21, ಸೋಲು 2, ಡ್ರಾ 5

ಎಂಎಸ್ ಧೋನಿ-ಪಂದ್ಯ 30,ಗೆಲುವು 21, ಸೋಲು 3, ಡ್ರಾ 6
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News