ತೈಲ ಬೆಲೆ ಏರಿಕೆ ಬಗ್ಗೆ ಮೌನರಾದ ಬಿಗ್ ಬಿ, ಅಕ್ಷಯ್ ಕುಮಾರ್

Update: 2021-02-18 18:08 GMT

ಹೊಸದಿಲ್ಲಿ, ಫೆ. 18: ಈ ಹಿಂದೆ ತೈಲ ಬೆಲೆ ಕುರಿತಂತೆ ಟೀಕಿಸಿದ, ಆದರೆ, ಈಗ ತೈಲ ಬೆಲೆ ಗಗನಕ್ಕೇರುತ್ತಿದ್ದರೂ ಮೌನವಾಗಿರುವ ಸೆಲೆಬ್ರೆಟಿಗಳ ವಿರುದ್ಧ ಮಹಾರಾಷ್ಟ್ರ ಸರಕಾರ ಬುಧವಾರ ಕಠಿಣ ನಿಲುವು ತೆಗೆದುಕೊಂಡಿದೆ. ತೈಲ ಬೆಲೆ ಕುರಿತು ಈ ಹಿಂದಿನಂತೆ ಈಗ ಕೂಡ ಮಾತನಾಡದ ಸೆಲೆಬ್ರೆಟಿಗಳಾದ ಅಮಿತಾಬ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ಅವರಂತವರ ಚಿತ್ರಗಳ ಚಿತ್ರೀಕರಣ ಹಾಗೂ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಹಾರಾಷ್ಟ್ರದ ಕಾಂಗ್ರೆಸ್ ವರಿಷ್ಠರು ಬೆದರಿಕೆ ಒಡ್ಡಿದ್ದಾರೆ.

ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ನ ಬೆದರಿಕೆ ಹಿನ್ನೆಲೆಯಲ್ಲಿ ಈ ಸೆಲೆಬ್ರಿಟಿಗಳಿಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ. ‘‘ತೈಲ ಬೆಲೆ ಏರಿಕೆ ಸಾಮಾನ್ಯ ಜನರ ಬದುಕಿಗೆ ಆಘಾತ ಉಂಟು ಮಾಡಿದೆ. ಮನಮೋಹನ್ ಸಿಂಗ್ ಅವರ ಸರಕಾರ ಇರುವಾಗ ಅಮಿತಾಬ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ಅವರಂತವರು ಟ್ವೀಟ್ ಬಳಿಸಿ ತೈಲ ಬೆಲೆ ಏರಿಕೆಯನ್ನು ಟೀಕಿಸಿದ್ದರು. ಆದರೆ, ಇಂದು ಮೌನರಾಗಿದ್ದಾರೆ’’ ಎಂದು ರಾಜ್ಯ ಕಾಂಗ್ರೆಸ್ ವರಿಷ್ಠ ನಾನಾ ಪಾಟೋಲೆ ಆರೋಪಿಸಿದ್ದಾರೆ.

ಸರ್ವಾಧಿಕಾರಿ ಮೋದಿ ಆಡಳಿತದ ಬಗ್ಗೆ ಮಾತನಾಡಲು ಅವರಿಗೆ ಧೈರ್ಯವಿಲ್ಲವೇ? ಮಹಾರಾಷ್ಟ್ರದಲ್ಲಿ ಅಮಿತಾಬ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ಭಾಗಿಯಾದ ಚಿತ್ರಗಳ ಶೂಟಿಂಗ್‌ಗೆ ಅವಕಾಶ ನೀಡುವುದಿಲ್ಲ. ಒಂದೋ ನೀವು ನರೇಂದ್ರ ಮೋದಿ ಸರಕಾರದ ದೇಶ ವಿರೋಧಿ ನೀತಿಗಳ ವಿರುದ್ಧ ಮಾತನಾಡಬೇಕು ಅಥವಾ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಬೇಕು ಎಂದು ಪಾಟೋಲೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News