ಫೆ. 22ರಂದು ಕಾಂಗ್ರೆಸ್‌ನಿಂದ ಬಹುಮತ ಸಾಬೀತು
Update: 2021-02-18 23:39 IST
ಪುದುಚೇರಿ, ಫೆ. 18: ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಬಿಕ್ಕಟ್ಟಿನಲ್ಲಿರುವ ನಡುವೆ ಫೆಬ್ರವರಿ 22 (ಸೋಮವಾರ)ರಂದು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ತಮಿಳ್ ಇಸೈ ಸೌಂದರರಾಜನ್ ಗುರುವಾರ ಆದೇಶಿಸಿದ್ದಾರೆ.
ಬಿಕ್ಕಟ್ಟಿಗೊಳಗಾದ ಪುದುಚೇರಿಯಲ್ಲಿ ಪ್ರತಿಪಕ್ಷಗಳು ಬುಧವಾರ ಲೆಫ್ಟಿನೆಂಟ್ ಗವರ್ನರ್ ಕಚೇರಿಗೆ ಜ್ಞಾಪಕಾ ಪತ್ರ ಸಲ್ಲಿಸಿ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿಗೆ ನಿರ್ದೇಶಿಸುವಂತೆ ಕೋರಿದ್ದವು. ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಎನ್. ರಂಗಸ್ವಾಮಿ ಹಾಗೂ ಎಐಎಡಿಎಂಕೆಯ ಸದನದ ನಾಯಕ ಎ. ಅನ್ಬಝಗಾನ್ ಹಾಗೂ ಬಿಜೆಪಿಯ ಸದನದ ನಾಯಕ ವಿ. ಸಾಮಿನಾಥನ್ ಅವರು 14 ಮಂದಿ ಶಾಸಕರು ಸಹಿ ಹಾಕಿದ ಜ್ಞಾಪನಾ ಪತ್ರವನ್ನು ಲೆಫ್ಟಿನೆಂಟ್ ಗವರ್ನರ್ ಅವರ ಕಚೇರಿಗೆ ಸಲ್ಲಿಸಿದರು. ಅಲ್ಲದೆ, ಬಹುಮತ ಸಾಬೀತಿಗೆ ವಿಶೇಷ ವಿಧಾನ ಸಭೆ ಅಧಿವೇಶನ ಕರೆಯುವಂತೆ ಕೋರಿದರು.