ಗೃಹ ಸಚಿವ ಅಮಿತ್ ಶಾಗೆ ಸಮನ್ಸ್ ನೀಡಿದ ಪಶ್ಚಿಮಬಂಗಾಳದ ನ್ಯಾಯಾಲಯ

Update: 2021-02-19 12:03 GMT

ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮಬಂಗಾಳದ ನಿಯೋಜಿತ ಸಂಸದ/ಶಾಸಕ ನ್ಯಾಯಾಲಯವು ಗೃಹ ಸಚಿವ ಅಮಿತ್ ಶಾ ಅವರಿಗೆ ಫೆಬ್ರವರಿ 22ಕ್ಕಿಂತ ಮೊದಲು ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ತನ್ನ ಎದುರು ಹಾಜರಾಗುವಂತೆ ಶುಕ್ರವಾರ ಸಮನ್ಸ್ ನೀಡಿದೆ.

ಫೆಬ್ರವರಿ 22ಕ್ಕಿಂತ ಮೊದಲು ಬೆಳಗ್ಗೆ 10 ಗಂಟೆಗೆ ತನ್ನ ಮುಂದೆ ಖುದ್ದಾಗಿ ಇಲ್ಲವೇ ಅರ್ಜಿದಾರರ ಮೂಲಕ ಹಾಜರಾಗುವಂತೆ ಬಿಧಾನ್‌ನಗರದಲ್ಲಿರುವ ನಿಯೋಜಿತ ಸಂಸದ/ಶಾಸಕ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ಅಮಿತ್ ಶಾಗೆ ನಿರ್ದೇಶನ ನೀಡಿದ್ದಾರೆ.

  ಭಾರತೀಯ ದಂಡ ಸಂಹಿತೆ 500ರ ಅಡಿಯಲ್ಲಿ  ಮಾನನಷ್ಟ ಮೊಕದ್ದಮೆಗೆ ಅಮಿತ್ ಶಾ ಅವರು ವೈಯಕ್ತಿಕವಾಗಿ ಇಲ್ಲವೇ ವಕೀಲರ ಮೂಲಕ ಉತ್ತರಿಸುವ ಅಗತ್ಯವಿದೆ ಎಂದು ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ.

ಕೋಲ್ಕತಾದ ಮಯೋ ರೋಡ್ ನಲ್ಲಿ 2018ರ ಆಗಸ್ಟ್ 11ರಂದು ನಡೆದಿದ್ದ ಬಿಜೆಪಿಯ ರ್ಯಾಲಿಯ ವೇಳೆ ಅಮಿತ್ ಶಾ ಅವರು ತೃಣಮೂಲ ಕಾಂಗ್ರೆಸ್ ಸಂಸದರ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದರು ಎಂದು ಮಮತಾ ಬ್ಯಾನರ್ಜಿ ಅವರ ಅಳಿಯ ಅಭಿಷೇಕ್ ಬ್ಯಾನರ್ಜಿ ಅವರ ವಕೀಲರಾದ ಸಂಜಯ್ ಬಸು ಪತ್ರಿಕಾ ಟಿಪ್ಪಣಿಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News