ಉತ್ತರಾಖಂಡ ಹಿಮಪಾತ: 61 ಮೃತದೇಹ, 28 ಮೃತದೇಹದ ಅವಶೇಷಗಳು ಪತ್ತೆ

Update: 2021-02-19 16:16 GMT

ಡೆಹ್ರಾಡೂನ್, ಫೆ.19: ಉತ್ತರಾಖಂಡದಲ್ಲಿ ಹಠಾತ್ ಹಿಮಪಾತದಿಂದ ಹಲವು ನದಿಗಳಲ್ಲಿ ಉಂಟಾದ ಭಾರೀ ಪ್ರವಾಹದ ಕಾರಣ ತಪೋವನ ಸುರಂಗದಲ್ಲಿ ಸಿಲುಕಿದ್ದವರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಇದುವರೆಗೆ 61 ಮೃತದೇಹ ಹಾಗೂ 28 ಮೃತದೇಹದ ಭಾಗಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

61 ಮೃತದೇಹಗಳಲ್ಲಿ 34 ಮೃತದೇಹ ಹಾಗೂ ಒಂದು ಮೃತದೇಹದ ಭಾಗದ ಗುರುತು ಪತ್ತೆಯಾಗಿದೆ. 49 ಮೃತದೇಹ ಹಾಗೂ 56 ಕುಟುಂಬ ಸದಸ್ಯರ ಡಿಎನ್‌ಎ ಮಾದರಿ ಸಂರಕ್ಷಿಸಲಾಗಿದೆ. ಅವಶೇಷಗಳಡಿ ಸಿಕ್ಕಿಬಿದ್ದಿರುವ ಕಟ್ಟಕಡೆಯ ವ್ಯಕ್ತಿಯ ಪತ್ತೆಯಾಗುವವರೆಗೂ ಶೋಧ, ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಉತ್ತರಾಖಂಡ ಪೊಲೀಸರು ಹೇಳಿದ್ದಾರೆ.

ಉತ್ತರಾಖಂಡದ ರೇನಿ ಗ್ರಾಮದಿಂದ ಶ್ರೀನಗರದವರೆಗೆ ನಡೆಯುತ್ತಿರುವ ಶೋಧ ಮತ್ತು ರಕ್ಷಣೆ ಕಾರ್ಯಾಚರಣೆಯಲ್ಲಿ ರಾಜ್ಯ ವಿಪತ್ತು ನಿರ್ವಹಣೆ ದಳದ 12 ತಂಡಗಳು ಪಾಲ್ಗೊಂಡಿವೆ. ತಪೋವನ ಸುರಂಗದೊಳಗೆ ಭಾರೀ ಪ್ರಮಾಣದಲ್ಲಿ ಕಸಕಡ್ಡಿ ಮತ್ತು ಕೆಸರು ತುಂಬಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News