ಉನ್ನಾವೊ ಪ್ರಕರಣ: ಬಿಗಿ ಭದ್ರತೆಯ ಮಧ್ಯೆ ಇಬ್ಬರು ಬಾಲಕಿಯರ ಅಂತ್ಯಸಂಸ್ಕಾರ

Update: 2021-02-19 16:26 GMT

ಲಕ್ನೊ, ಫೆ.19: ಉತ್ತರಪ್ರದೇಶದ ಉನ್ನಾವೊ ಜಿಲ್ಲೆಯ ಗ್ರಾಮದ ಗದ್ದೆಯಲ್ಲಿ ಪತ್ತೆಯಾದ ಇಬ್ಬರು ದಲಿತ ಬಾಲಕಿಯರ ಮೃತದೇಹದ ಅಂತ್ಯಸಂಸ್ಕಾರವನ್ನು ಬಿಗಿಭದ್ರತೆಯ ಮಧ್ಯೆ ಶುಕ್ರವಾರ ಬೆಳಿಗ್ಗೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುರುವಾರ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು ಶುಕ್ರವಾರ ಬೆಳಿಗ್ಗೆ ಹುಟ್ಟೂರಿಗೆ ತಂದು ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬಂದಿಗಳ ಉಪಸ್ಥಿತಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅಂತ್ಯಸಂಸ್ಕಾರ ನಡೆಸುವ ಸ್ಥಳದಲ್ಲಿ ಬ್ಯಾರಿಕೇಡ್ ನಿರ್ಮಿಸಿ ಬೃಹತ್ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಗ್ರಾಮವನ್ನು ಪ್ರವೇಶಿಸುವ ನಾಲ್ಕು ರಸ್ತೆಗಳಲ್ಲೂ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ಜನರನ್ನು ತಪಾಸಣೆ ನಡೆಸಲು ಪ್ರತೀ ಬ್ಯಾರಿಕೇಡ್‌ನಲ್ಲೂ ಮ್ಯಾಜಿಸ್ಟ್ರೇಟ್ ಹಂತದ ಅಧಿಕಾರಿಯನ್ನು ನಿಯೋಜಿಸಲಾಗಿತ್ತು. ಗುರುವಾರವೇ ಅಂತ್ಯಸಂಸ್ಕಾರ ನಡೆಸುವ ಬಗ್ಗೆ ಮೃತರ ಕುಟುಂಬಿಕರ ಮನವೊಲಿಸುವ ಕಾರ್ಯ ವಿಫಲವಾಗಿತ್ತು. ಅಂತ್ಯಸಂಸ್ಕಾರ ನಡೆಸುವ ವಿಷಯದಲ್ಲಿ ಮೃತರ ಕುಟುಂಬದವರ ಮೇಲೆ ಯಾವುದೇ ಒತ್ತಡ ಹೇರಿಲ್ಲ ಎಂದು ಉನ್ನಾವೊ ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಹೇಳಿದ್ದಾರೆ. ಕುಟುಂಬದವರು ಸರಕಾರದ ಎದುರು ಯಾವುದೇ ಬೇಡಿಕೆ ಇರಿಸಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಸ್ಥಳೀಯ ಶಾಸಕರು ಅಂತ್ಯಸಂಸ್ಕಾರದ ಸಂದರ್ಭ ಸ್ಥಳದಲ್ಲಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News