ರಾಜಸ್ಥಾನ: ಮುಂದಿನ ವಾರ ಅಖಿಲ ಭಾರತ್ ಕಿಸಾನ ಸಭಾ ದಿಂದ ಮಹಾಪಂಚಾಯತ್‌ಗಳ ಆಯೋಜನೆ

Update: 2021-02-20 17:56 GMT

ಜೈಪುರ,ಫೆ.20: ಅಖಿಲ ಭಾರತ ಕಿಸಾನ ಸಭಾ (ಎಐಕೆಎಸ್) ಫೆ.22ರಿಂದ ಫೆ.26ರವರೆಗೆ ರಾಜಸ್ಥಾನದಲ್ಲಿ ರಾಕೇಶ ಟಿಕಾಯತ್ ಸೇರಿದಂತೆ ರೈತ ನಾಯಕರ ನೇತೃತ್ವದಲ್ಲಿ ಹಲವಾರು ಕಿಸಾನ ಮಹಾಪಂಚಾಯತ್‌ಗಳನ್ನು ನಡೆಸಲಿದೆ. ಇಂತಹ ಮೊದಲ ಮಹಾಪಂಚಾಯತ್ ಫೆ.22ರಂದು ಹನುಮಾನಗಡ ಜಿಲ್ಲೆಯ ನೋಹರ್‌ನಲ್ಲಿ ನಡೆಯಲಿದೆ. ನಂತರದ ದಿನಗಳಲ್ಲಿ ಸಿಕಾರ್,ಸರದಾರ್‌ಶಹರ (ಚುರು),ಮೆಹೆಂದಿಪುರ ಬಾಲಾಜಿ (ದೌಸಾ),ಪದಮ್‌ಪುರ ಮಂಡಿ ಮತ್ತು ಘಡ್ಸಾನಾ ಮಂಡಿ (ಗಂಗಾನಗರ)ಗಳಲ್ಲಿ ಮಹಾಪಂಚಾಯತ್‌ಗಳು ನಡೆಯಲಿವೆ ಎಂದು ಎಐಕೆಎಸ್‌ನ ವಕ್ತಾರರು ಶನಿವಾರ ಇಲ್ಲಿ ತಿಳಿಸಿದರು.

ಭಾರತೀಯ ಕಿಸಾನ ಯೂನಿಯನ್‌ನ ರಾಷ್ಟ್ರೀಯ ವಕ್ತಾರ ಟಿಕಾಯತ್ ಮತ್ತು ಎಐಕೆಎಸ್‌ನ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಅಮರಾರಾಮ ಅವರು ಈ ಮಹಾಪಂಚಾಯತ್‌ಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಆಲ್ವಾರ್ ಸಮೀಪ ಶಾಹಜಹಾನ್‌ಪುರ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರಾಜಸ್ಥಾನದ ಭಾರೀ ಸಂಖ್ಯೆಯ ರೈತರು ಪಾಲ್ಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News