ಇಲೆಕ್ಟ್ರಿಕ್ ವಾಹನ ಬಳಕೆಯಿಂದ ಭಾರೀ ಹಣ ಉಳಿತಾಯ: ನಿತಿನ್ ಗಡ್ಕರಿ

Update: 2021-02-20 18:00 GMT

ಹೊಸದಿಲ್ಲಿ: ತನ್ನ ಇಲಾಖೆಯ ಅಧಿಕಾರಿಗಳಿಗೆ ಇಲೆಕ್ಟ್ರಿಕ್ ವಾಹನ ಬಳಕೆ ಕಡ್ಡಾಯಗೊಳಿಸಲಾಗುವುದು. ಇಲೆಕ್ಟ್ರಿಕ್ ವಾಹನ ಬಳಕೆಯಿಂದ  ಭಾರೀ ಹಣ ಉಳಿತಾಯವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಗಡ್ಕರಿ ಶುಕ್ರವಾರ ದಿಲ್ಲಿಯಲ್ಲಿ “ಗೋ ಇಲೆಕ್ಟ್ರಿಕ್’' ಅಭಿಯಾನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

“ಒಂದು ವೇಳೆ 10,000 ಇಲೆಕ್ಟ್ರಿಕ್ ವಾಹನಗಳನ್ನು ದಿಲ್ಲಿಯಲ್ಲಿ ಬಳಕೆಗೆ ತಂದರೆ ಪ್ರತಿ ತಿಂಗಳು ಇಂಧನಕ್ಕೆ ವ್ಯಯಿಸುವ ಸುಮಾರು 30 ಕೋಟಿ ರೂ.ವನ್ನು ಉಳಿಸಬಹುದು ಹಾಗೂ ವಾಯು ಮಾಲಿನ್ಯವನ್ನು ಕಡಿಮೆ ಮಾಡಬಹುದು. ನಾನು ನನ್ನ ಇಲಾಖೆಯ ಅಧಿಕಾರಿಗಳಿಗೆ ಇಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಕಡ್ಡಾಯ ಮಾಡಲಿದ್ದೇನೆ'' ಎಂದು ಗಡ್ಕರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News