ಅಪಾಯಕ್ಕೆ ಆಹ್ವಾನಿಸುತ್ತಿರುವ ರಸ್ತೆಯಲ್ಲಿನ ಸರಳುಗಳು!

Update: 2021-02-21 12:28 GMT

ಉಡುಪಿ, ಫೆ.21: ಕಲ್ಸಂಕ ರಾಷ್ಟ್ರೀಯ ಹೆದ್ದಾರಿ ಬಳಿ ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳವನ್ನು ಸಂಪರ್ಕಿಸುವ ರಸ್ತೆಯ ತಿರುವಿನಲ್ಲಿ ಕಾಂಕ್ರೀಟ್ ರಸ್ತೆಯ ಜಲ್ಲಿ ಕಲ್ಲುಗಳೆಲ್ಲ ಕಿತ್ತುಹೋಗಿದ್ದು, ರಸ್ತೆಯ ಒಳಗಿದ್ದ ಕಬ್ಬಿಣದ ಸರಳುಗಳು ಮೇಲೆದ್ದು ಅಪಾಯವನ್ನು ಆಹ್ವಾನಿಸುತ್ತಿದೆ.

​ಕಳಪೆ ಮಟ್ಟದ ಕಾಮಗಾರಿಯಿಂದ ಈ ಸಮಸ್ಯೆ ಉದ್ಭವಿಸಲು ಕಾರಣ ವಾಗಿದೆ. ಈ ಮುಖ್ಯ ರಸ್ತೆಯಲ್ಲಿ ನಸುಕಿನ ಜಾವ ವಾಯು ವಿಹಾರಿಗಳು, ಯಾತ್ರಿಕರು, ಪಾದಚಾರಿಗಳು ಸಂಚರಿಸುತ್ತಿರುತ್ತಾರೆ. ಕಂಬಿಗಳು ಕಾಲಿಗೆ ತಾಗಿ ಪಾದಚಾರಿಗಳು ಎಡವಿಬಿದ್ದು ಗಾಯಾಳುಗಳಾದ ಘಟನೆಗಳು ಇಲ್ಲಿ ನಡೆದಿವೆ. ನಗರಾಡಳಿತ ತಕ್ಷಣ ಕಬ್ಬಿಣದ ಸರಳುಗಳನ್ನು ಕತ್ತರಿಸಬೇಕು ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News