ಸಮುದ್ರದಲ್ಲಿ ಮುಳುಗಿ ಮೀನುಗಾರ ಮೃತ್ಯು

Update: 2021-02-22 15:43 GMT

ಕಾಪು, ಫೆ.22: ಟ್ಯೂಬ್ ಸಹಾಯದಿಂದ ಬಲೆ ಹಾಕಿ ಮೀನುಗಾರಿಕೆ ಮಾಡಲು ಹೋದ ಮೀನುಗಾರರೊಬ್ಬರು ಆಕಸ್ಮಿಕವಾಗಿ ಸಮುದ್ರದ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ಕಾಪು ಪೊಲಿಪು ನಿವಾಸಿ ಮನೋಜ್(45) ಎಂದು ಗುರುತಿಸ ಲಾಗಿದೆ. ಫೆ.20ರಂದು ಮಧ್ಯಾಹ್ನ ಮೀನುಗಾರಿಕೆಗೆ ತೆರಳಿದ್ದ ಇವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಫೆ.21ರಂದು ಮಧ್ಯಾಹ್ನ ಇವರ ಮೃತದೇಹ ಪೊಲಿಪು ಪಡು ಲಕ್ಷ್ಮೀನಾರಾಯಣ ಭಜನಾ ಮಂದಿರದ ಬಳಿ ಸಮುದ್ರ ತೀರ ದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News