ಶ್ರೀಲಂಕಾಗೆ ತೆರಳಲು ಭಾರತದ ವಾಯುಪ್ರದೇಶದ ಬಳಸುವಂತೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಗೆ ಕೇಂದ್ರ ಅನುಮತಿ: ವರದಿ

Update: 2021-02-23 06:24 GMT

ಹೊಸದಿಲ್ಲಿ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ವಿಮಾನವನ್ನು ಭಾರತೀಯ ವಾಯುಪ್ರದೇಶವನ್ನು ಬಳಸಿಕೊಂಡು ಶ್ರೀಲಂಕಾಕ್ಕೆ ತೆರಳಲು ಭಾರತ ಸರಕಾರ ಅನುಮತಿಸಿದೆ ಎಂದು ಮೂಲಗಳು ಎಎನ್‌ಐಗೆ ತಿಳಿಸಿವೆ. ಫೆಬ್ರವರಿ 23 ರಂದು ಇಮ್ರಾನ್ ಖಾನ್ ತಮ್ಮ ಚೊಚ್ಚಲ ಭೇಟಿಯಲ್ಲಿ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾ ಮತ್ತು ಸೌದಿ ಅರೇಬಿಯಾಗಳಿಗೆ ತೆರಳಲು 2019 ರಲ್ಲಿ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ತೆರೆಯಲು ನಿರಾಕರಿಸಿತ್ತು. ವಿವಿಐಪಿ ಹಾರಾಟಕ್ಕೆ ಅನುಮತಿ ನಿರಾಕರಣೆಯ ಕುರಿತಾದಂತೆ ಭಾರತವು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News