ಸಾಂಗ್ಲಿ ಮೇಯರ್ ಹುದ್ದೆಯನ್ನು ಬುಟ್ಟಿಗೆ ಹಾಕಿಕೊಂಡ ಎನ್‌ಸಿಪಿ: ಬಿಜೆಪಿಗೆ ಆಘಾತ

Update: 2021-02-23 15:25 GMT

ಪುಣೆ,ಫೆ.23: ಬಿಜೆಪಿ ಆಡಳಿತವಿದ್ದ ಸಾಂಗ್ಲಿ-ಮಿರಜ್-ಕುಪ್ವಾಡ್ ಮಹಾನಗರ ಪಾಲಿಕೆಯ ಮೇಯರ್ ಹುದ್ದೆಗೆ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಿಸುವಲ್ಲಿ ಶರದ್ ಪವಾರ್ ನಾಯಕತ್ವದ ಎನ್‌ಸಿಪಿ ಯಶಸ್ವಿಯಾಗುವ ಮೂಲಕ ಬಿಜೆಪಿ ಪಕ್ಷಕ್ಕೆ ಭಾರೀ ಆಘಾತವನ್ನುಂಟು ಮಾಡಿದೆ.

ಮಂಗಳವಾರ ಮೇಯರ್ ಹುದ್ದೆಗೆ ನಡೆದ ಚುನಾವಣೆಯಲ್ಲಿ ಎನ್‌ಸಿಪಿಯ ದಿಗ್ವಿಜಯ್ ಸೂರ್ಯವಂಶಿ ಅವರು 39 ಮತಗಳನ್ನು ಪಡೆದರೆ ಬಿಜೆಪಿಯ ಧೀರಜ್ ಸೂರ್ಯವಂಶಿ 36 ಮತಗಳನ್ನು ಪಡೆದರು. ಮಹಾನಗರ ಪಾಲಿಕೆಯಲ್ಲಿ 78 ಸದಸ್ಯರಿದ್ದು,ಐವರು ಬಿಜೆಪಿ ಕಾರ್ಪೊರೇಟರ್‌ಗಳು ಎನ್‌ಸಿಪಿ ಪರವಾಗಿ ಮತ ಚಲಾಯಿಸಿದ್ದಾರೆ. ಇಬ್ಬರು ಮತದಾನದಿಂದ ದೂರವುಳಿದಿದ್ದರು ಎಂದು ಎನ್‌ಸಿಪಿ ಜಿಲ್ಲಾದ್ಯಕ್ಷ ಸಂಜಯ್ ಬಜಾಜ್ ತಿಳಿಸಿದರು.

ಈ ಮೊದಲು ಮನಪಾದಲ್ಲಿ ಬಿಜೆಪಿಯ 43 ಕಾರ್ಪೊರೇಟರ್‌ಗಳಿದ್ದರೆ ಎನ್‌ಸಿಪಿ 34 ಕಾರ್ಪೊರೇಟರ್‌ಗಳನ್ನು ಹೊಂದಿತ್ತು. ಪಕ್ಷವು ಚುನಾವಣೆಯಲ್ಲಿ ಏಳು ಮತಗಳ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರು.

ಕಾಂಗ್ರೆಸ್‌ನ ಉಮೇಶ್ ಪಾಟೀಲ್ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News