ಫೆ.26ರಿಂದ ಬೆಲೆ ಏರಿಕೆ ವಿರುದ್ಧದ ಪ್ರತಿಭಟನಾ ಪ್ರದರ್ಶನ

Update: 2021-02-23 15:33 GMT

ಮಂಗಳೂರು, ಫೆ.23: ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ದ.ಕ.ಜಿಲ್ಲಾದ್ಯಂತ ಸಿಪಿಎಂ ಫೆ.26ರಿಂದ ಮಾರ್ಚ್ 2ರವರೆಗೆ ಪ್ರತಿಭಟನಾ ಪ್ರದರ್ಶನ ನಡೆಸಲಿದೆ.

ಕೇಂದ್ರ ಸರಕಾರದ ರೈತ ನೀತಿ, ಆಹಾರ ನೀತಿ, ಆರೋಗ್ಯ ನೀತಿಗಳ ವಿರುದ್ಧ ದನಿ ಎತ್ತಿದವರನ್ನು ಸರಕಾರವು ವಿವಿಧ ಅಪರಾಧ ಪ್ರಕರಣಗಳಲ್ಲಿ ಸಿಲುಕಿಸಿ ದಮನ ಮಾಡುತ್ತಿದೆ. ಸರಕಾರದ ದಮನಕಾರಿ ನೀತಿಗಳ ವಿರುದ್ಧ ಸಿಪಿಎಂ ಪಕ್ಷವು ಸಂಸತ್ತಿನ ಒಳಗೂ ಹೊರಗೂ ಪ್ರತಿರೋಧ ವ್ಯಕ್ತಪಡಿಸಿದೆ. ಇದೀಗ ಫೆ.26ರಿಂದ ಪ್ರತಿಭಟನಾ ಪ್ರದರ್ಶನ ನಡೆಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News