ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ ಪ್ರಕರಣ : ಆರೋಪ ಸಾಬೀತು

Update: 2021-02-23 16:04 GMT

ಉಡುಪಿ, ಫೆ.23: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿ, ಬೆದರಿಕೆ ಹಾಕಿದ ಪ್ರಕರಣದ ಆರೋಪಿಯನ್ನು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ದೆಷಿ ಎಂಬುದಾಗಿ ಇಂದು ಆದೇಶ ನೀಡಿದೆ.

ಆರೋಪಿಯನ್ನು ಬ್ರಹ್ಮಾವರ ತಾಲೂಕಿನ ಕೇಶವ (32) ಎಂದು ಗುರುತಿಸ ಲಾಗಿದೆ. ಸಂತ್ರಸ್ತೆಯ ಸಂಬಂಧಿಯೂ ಆಗಿರುವ ಆರೋಪಿ ಈತ 2016ರಲ್ಲಿ 15ವರ್ಷ ಪ್ರಾಯದ ಬಾಲಕಿ ಮನೆಗೆ ಅಕ್ರಮ ಪ್ರವೇಶ ಮಾಡಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದನು. ಈ ವೇಳೆ ಬಾಲಕಿಯ ಮಾವ ಬರುವು ದನ್ನು ನೋಡಿ ಆರೋಪಿ, ಬಾಲಕಿಗೆ ಬೆದರಿಕೆ ಹಾಕಿ ಓಡಿ ಹೋಗಿದ್ದನು. ಈ ಕುರಿತು ಸಂತ್ರಸ್ತ ಬಾಲಕಿ ಕುಂದಾಪುರದಲ್ಲಿದ್ದ ಮಹಿಳಾ ಠಾಣೆಗೆ ದೂರು ನೀಡಿದ್ದು ಆರೋಪಿಯನ್ನು ಪೊಕ್ಸೋ ಕಾಯ್ದೆಯಡಿ ಬಂಧಿಸಲಾಗಿತ್ತು.

ಅಂದಿನ ಮಹಿಳಾ ಠಾಣೆ ಉಪನಿರೀಕ್ಷಕಿ ಸುಜಾತಾ ಸಾಲ್ಯಾನ್ ದೋಷಾ ರೋಪಣೆ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 11 ಮಂದಿ ಸಾಕ್ಷಿಗಳ ಪೈಕಿ ಸಂತ್ರಸ್ತೆ ಹಾಗೂ ಆತನ ಸಹೋದರನ ಸಾಕ್ಷ್ಯವು ಪ್ರಕರಣದಲ್ಲಿ ಅಭಿಯೋಜನೆಗೆ ಪೂರಕವಾಗಿತ್ತು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶೆ ಯಾದವ್ ವನಮಾಲಾ ಆನಂದರಾವ್ ಆರೋಪಿಯನ್ನು ದೋಷಿಯೆಂದು ತೀರ್ಮಾನಿಸಿ ಆದೇಶ ನೀಡಿದರು.

ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News