ಲಂಚ ಸ್ವೀಕಾರ ಆರೋಪ : ಮಂಗಳೂರು ಸರ್ವೇಯರ್ ಎಸಿಬಿ ಬಲೆಗೆ

Update: 2021-02-24 04:33 GMT

ಮಂಗಳೂರು: ಲಂಚಕ್ಕಾಗಿ ಪೀಡಿಸುತ್ತಿದ್ದ ಆರೋಪದಲ್ಲಿ ಮಂಗಳೂರು ನಗರ ಸರ್ವೇಯರ್ ( ಮಂಗಳೂರು ತಾಲೂಕಿನ ಪ್ರಭಾರ) ಗಂಗಾಧರ್ ಮಂಗಳೂರಿನ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ನಗರದಲ್ಲಿ ಉದ್ಯಮಿಯೋರ್ವರು ತಮ್ಮ ಕಚೇರಿಯ ಪೀಠೋಪಕರಣ ಮಾಡಿಸಲು ತಮ್ಮ ಮನೆಯ ಆವರಣದಲ್ಲಿ ಇದ್ದ ಸಾಗುವಾನಿ ಮರವನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿಗಾಗಿ ಕೋರಿಕೆ ಪತ್ರ ಸಲ್ಲಿಸಿದ್ದರು. ಮಂಗಳೂರು ನಗರದ ಅರಣ್ಯ ಇಲಾಖೆ ಈ ಪತ್ರವನ್ನು ಕಂದಾಯ ಇಲಾಖೆಗೆ ಕಳಿಸಿತ್ತು.

ಒಂದು ತಿಂಗಳು ಕಳೆದರೂ ಸ್ಥಳ ಪರಿಶೀಲನೆ ನಡೆಸಲು ಬಾರದ ಸರ್ವೇಯರ್ ಗಂಗಾಧರ್ ಸ್ಥಳ ಪರಿಶೀಲನೆ ನಡೆಸಲು 3,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು, ಕಂದಾಯ ಇಲಾಖೆಗೆ ಕಟ್ಟಬೇಕಾದ 600 ರೂ. ಜೊತೆಯಲ್ಲಿ ಇವರಿಗೆ 3,000 ರೂ. ಕೊಟ್ಟಿದ್ದು, ತಿಂಗಳು ಕಳೆದರೂ ಮರ ಇರುವ ಸ್ಥಳದ ನಕಾಶೆ ನೀಡಲು ಉದ್ಯಮಿಗೆ ಮತ್ತೆ 30,000 ರೂ. ಡಿಮಾಂಡ್ ಇರಿಸಿದ್ದರು ಎನ್ನಲಾಗಿದ್ದು, ಇದರಿಂದ ಉದ್ಯಮಿ ಮಂಗಳೂರಿನ ಪರಿಸರ ಸಂರಕ್ಷಣಾ ಸದಸ್ಯರ ಗಮನಕ್ಕೆ ತಂದಿದ್ದು, ನಂತರ ಈ ವಿಚಾರವನ್ನು ಮಂಗಳೂರಿನ ಎಸಿಬಿ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಮಂಗಳೂರಿನ ಮಿನಿ ವಿಧಾನಸೌಧದ ಎದುರು  20 ಸಾವಿರ ರೂ. ಲಂಚದ ಹಣ ತೆಗೆದುಕೊಳ್ಳುವ ವೇಳೆ ಸಾಕ್ಷಿ ಸಮೇತ ಸರ್ವೇಯರ್ ಗಂಗಾಧರ್ ಅವರನ್ನು ಎಸಿಬಿ ತಂಡ ಬಂಧಿಸಿತು ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News