ಬಂಟ್ವಾಳ: ಮೂಲಭೂತ ಸೌಕರ್ಯ ವಂಚಿತ ಶಾಲಾ ಮಾಹಿತಿ ಸಂಗ್ರಹ ಅಭಿಯಾನ

Update: 2021-02-24 07:23 GMT

ಬಂಟ್ವಾಳ: ಬಂಟ್ವಾಳ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶ ವ್ಯಾಪ್ತಿಯ ಮೂಲಭೂತ ಸೌಕರ್ಯ ವಂಚಿತ ಸರಕಾರಿ ಶಾಲೆಗಳ ಸ್ಥಿತಿಗತಿಗಳನ್ನು ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಗಮನಕ್ಕೆ ತರಲು ಬಂಟ್ವಾಳ ಶಿಕ್ಷಣ ಸಂಪನ್ಮೂಲ ಕೇಂದ್ರ 'ಮೂಲಭೂತ ಸೌಕರ್ಯ ವಂಚಿತ ಸರಕಾರಿ ಶಾಲೆಗಳ ಮಾಹಿತಿ ಸಂಗ್ರಹ ಅಭಿಯಾನ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮೂಲಭೂತ ಸೌಕರ್ಯ ವಂಚಿತ ಸರಕಾರಿ ಶಾಲೆಗಳ  ಸರ್ವಾಂಗೀಣ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾದ ಈ ಅಭಿಯಾನಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯವಾಗಿದ್ದು, ಈ ಸಂಬಂಧ ಸ್ಥಳೀಯ ಗ್ರಾ.ಪಂ. ಸದಸ್ಯರು, ಎಸ್.ಡಿ.ಎಂ.ಸಿ. ಸದಸ್ಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿ ಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಜೋಡಿಸಬೇಕಾಗಿದೆ.

 ಈ ಪ್ರಯುಕ್ತ ತಾಲೂಕಿನಲ್ಲಿರುವ ಮೂಲಭೂತ ಸೌಕರ್ಯ ವಂಚಿತ ಶಾಲೆಗಳನ್ನು ಗುರುತಿಸಿ ವಾಟ್ಸ್ ಅಪ್ 9844740487 ಮುಖೇನ ಮಾಹಿತಿ ನೀಡುವಂತೆ ಬಂಟ್ವಾಳ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಫಾರೂಕ್ ಗೂಡಿನಬಳಿ ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News