ಮುಸ್ಲಿಮ್ ಒಕ್ಕೂಟದ ಕಾಪು ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಶಭಿ ಅಹ್ಮದ್ ಕಾಝಿ

Update: 2021-02-24 09:23 GMT

ಕಾಪು : ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ 2021-22ನೇ ಸಾಲಿನ ಕಾಪು ತಾಲ್ಲೂಕು ಅಧ್ಯಕ್ಷರಾಗಿ ಶಭಿ ಅಹ್ಮದ್ ಕಾಝಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಕಾಪು ತಾಲ್ಲೂಕು ಜಮೀಯತುಲ್ ಫಲಾಹ್ ಕಚೇರಿಯಲ್ಲಿ ಮಂಗಳವಾರ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಎಸ್.ಪಿ. ಉಮರ್ ಫಾರೂಕ್, ಕಾರ್ಯದರ್ಶಿಯಾಗಿ ರಿಯಾಝ್ ನಝೀರ್ ಮುದರಂಗಡಿ, ಜತೆಕಾರ್ಯದರ್ಶಿಯಾಗಿ ವೈ.ಎಮ್. ಇಲ್ಯಾಸ್ ಕಟಪಾಡಿ, ಕೋಶಾಧಿಕಾರಿ ನಸೀರ್ ಅಹಮದ್ ಶರ್ಫುದ್ದೀನ್, ಸದಸ್ಯರಾಗಿ ಇಸ್ಮಾಯಿಲ್ ಹುಸೈನ್, ಅನ್ವರ್ ಆಲಿ ಕಾಪು, ಅಬ್ದುಲ್ ಹಮೀದ್ ಉಚ್ಚಿಲ, ಬಿ. ಮೊಹಿಯುದ್ದೀನ್ ಕಟಪಾಡಿ, ಕೆ.ಎಚ್. ಉಸ್ಮಾನ್ ಕೊಪ್ಪಲಂಗಡಿ, ಮುಹಮ್ಮದ್ ಸುಲೈಮಾನ್ ಕೆ, ಎಚ್. ಅಬ್ದುಲ್ಲಾ,  ಅಬ್ದುಲ್ ಹಮೀದ್ ಪಡುಬಿದ್ರಿ, ಖಾಲಿದ್ ಮಣಿಪುರ, ಇಕ್ಬಾಲ್ ಎಸ್.ಕೆ. ಕಟಪಾಡಿ, ರಮೀಝ್ ಹುಸೈನ್ ಪಡುಬಿದ್ರಿ, ಎಂ.ಪಿ. ಮೊಯಿದಿನಬ್ಬ, ಮುಹಮ್ಮದ್ ಇಕ್ಬಾಲ್ ಮಜೂರು ಅವರನ್ನು ಆರಿಸಲಾಯಿತು.

ನಾಮನಿರ್ದೇಶಕ ಸದಸ್ಯರಾಗಿ ಮುಸ್ತಕ್ ಇಬ್ರಾಹಿಂ, ಮುಹಮ್ಮದ್ ರಫೀಕ್, ಆಝಮ್ ಶೈಕ್ ಉಚ್ಚಿಲ, ಅಬ್ದುಲ್ ರಹ್ಮಾನ್ ಹೆಜಮಾಡಿ, ಹಸನಬ್ಬ ಶಿರ್ವ ಇವರನ್ನು ನೇಮಕ ಮಾಡಲಾಯಿತು. 

ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಇಬ್ರಾಹಿಂ ಕೋಟ ಅಧ್ಯಕ್ಷತೆ ವಹಿಸಿದ್ದು, ಚುನಾವಣೆ ನಡೆಸಿಕೊಟ್ಟರು. ಜಿಲ್ಲಾ ಜತೆ ಕಾರ್ಯದರ್ಶಿ ಸಲಾಹುದ್ದೀನ್ ಹೂಡೆ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ಉದ್ಯಾವರ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News