ಮಂಗಳೂರು : ಬೆಲೆ ಏರಿಕೆಯ ವಿರುದ್ಧ ಜೆಡಿಎಸ್ ಪ್ರತಿಭಟನೆ

Update: 2021-02-25 11:27 GMT

ಮಂಗಳೂರು, ಫೆ. 24: ಇಂಧನ ಬೆಲೆ ಏರಿಕೆಯಿಂದಾಗಿ ದೈನಂದಿನ ಬಳಕೆಯ ವಸ್ತುಗಳ ಬೆಲೆಯು ದಿನದಿಂದ ಏರಿಕೆಯಾಗುತ್ತಿದ್ದರೂ ಕೂಡ ಕೇಂದ್ರ ಮತ್ತು ರಾಜ್ಯ ಸರಕಾರವು ಅದರ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ದ.ಕ.ಜಿಲ್ಲಾ ಜೆಡಿಎಸ್ ವತಿಯಿಂದ ಬುಧವಾರ ಮಂಗಳೂರು ಮಿನಿ ವಿಧಾನ ಸೌದ ಮುಂದೆ ಪ್ರತಿಭಟನೆ ನಡೆಸಿತು.

ಈ ಸಂದರ್ಭ ಖಾಲಿ ಸಿಲಿಂಡರ್ ಮುಂದಿಟ್ಟು, ಕೃತಕ ಒಲೆ ಸೃಷ್ಟಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಅಡುಗೆ ಅನಿಲ ಬೆಲೆ ಏರಿಕೆಯಿಂದ ಜನರ ಬದುಕಿನ ಮೇಲೆ ಭಾರಿ ಹೊಡೆತ ನೀಡಿದೆ. ಬೆಲೆ ಏರಿಕೆಗೆ ಸರಕಾರ ಕಡಿವಾಣ ಹಾಕುವ ಬದಲು ಮೌನ ತಾಳಿರುವುದು ಅಕ್ಷಮ್ಯವಾಗಿದೆ. ಜನರು ಈ ಬಗ್ಗೆ ಧ್ವನಿ ಎತ್ತಲೇಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬದುಕು ಇನ್ನಷ್ಟು ಕಷ್ಟವಾಗಬಹುದು ಎಂದರು.

ಪ್ರತಿಭಟನೆಯಲ್ಲಿ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಜೆಡಿಎಸ್ ಕಾರ್ಯಾಧ್ಯಕ್ಷ ವಸಂತ್ ಪೂಜಾರಿ, ಜೆಡಿಎಸ್ ಮುಖಂಡರಾದ ಸೈಯದ್ ಮೀರ್ ಸಾಬ್. ಸುಶೀಲ್ ನೊರೊನ್ಹಾ, ಜಾಕೆ ಮಾಧವ ಗೌಡ, ಸುಮತಿ ಹೆಗ್ಡೆ, ಡಿಪಿ ಹಮ್ಮಬ್ಬ ಕುಪ್ಪೆಪದವು, ರತ್ನಾಕರ ಸುವರ್ಣ, ಪುಷ್ಪರಾಜ್, ಪ್ರವೀಣ್‌ಚಂದ್ರ ಜೈನ್, ಮುನೀರ್ ಮುಕ್ಕಚೇರಿ, ರಕ್ಷಿತ್ ಕದ್ರಿ, ನಾಸಿರ್ ಬಂದರ್, ರಮೀಝಾ ನಾಸರ್, ಫಝಲ್ ರಹ್ಮಾನ್, ಅಶ್ರಫ್ ಕಲ್ಲೆಗ, ಇಕ್ಬಾಲ್ ಎಲಿಮಲೆ, ಪೃಥ್ವಿರಾಜ್ ಜೈನ್, ಹರಿಪ್ರಕಾಶ್ ಜೈನ್, ರಾಮ್‌ ಗಣೇಶ್, ಗೋಪಾಲಕೃಷ್ಣ ಅತ್ತಾವರ, ಪ್ರಭಾಕರ, ರತೀಶ್ ಕರ್ಕೇರಾ, ಶಾಲಿ ಅಹ್ಮದ್, ಫ್ರಾನ್ಸಿಸ್ ಫೆರ್ನಾಂಡೀಸ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News