ಉಡುಪಿ: 1605 ಮಂದಿಗೆ ಕೋವಿಡ್ 2ನೇ ಡೋಸ್

Update: 2021-02-24 13:51 GMT

ಉಡುಪಿ, ಫೆ.24: ಜಿಲ್ಲೆಯ 1605 ಮಂದಿ ಆರೋಗ್ಯ ಕಾರ್ಯಕರ್ತರು ಬುಧವಾರ ಕೋವಿಡ್‌ಗಿರುವ ಕೊವಿಶೀಲ್ಡ್ ಲಸಿಕೆಯ ಎರಡನೇ ಡೋಸ್‌ನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿರುವ 23889 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಇದುವರೆಗೆ ಒಟ್ಟು 7287 ಮಂದಿ 28 ದಿನಗಳ ಬಳಿಕ ನೀಡಲಾಗುವ ಎರಡನೇ ಡೋಸ್‌ನ್ನು ಪಡೆದುಕೊಂಡಂತಾಗಿದೆ. ಈ ಮೂಲಕ ಒಟ್ಟಾರೆಯಾಗಿ ಶೇ.30.5 ಸಾಧನೆಯಾಗಿದೆ.

ಜಿಲ್ಲೆಯ ವೈದ್ಯರೂ ಸೇರಿದಂತೆ 23,889 ಮಂದಿ ಆರೋಗ್ಯ ಕಾರ್ಯಕರ್ತರಿಗೆ ನೀಡುವ ಮೊದಲ ಡೋಸ್ ಲಸಿಕೆಯನ್ನು ಇಂದು 327 ಮಂದಿ ಪಡೆದಿದ್ದು, ಈ ಮೂಲಕ ಇದುವರೆಗೆ ಒಟ್ಟು 17,339 ಮಂದಿ (ಶೇ.72.6ರಷ್ಟು) ಆರೋಗ್ಯ ಕಾರ್ಯಕರ್ತರು ಲಸಿಕೆಯನ್ನು ಪಡೆದಂತಾಗಿದೆ.

ಇದೀಗ ಎರಡನೇ ಹಂತದಲ್ಲಿ ಜಿಲ್ಲೆಯ 4283 ಮಂದಿ ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತಿರುವ ಮೊದಲ ಸುತ್ತಿನ ಕೋವಿಡ್ ಲಸಿಕೆ ಯನ್ನು ಬುಧವಾರ 145 ಮಂದಿ ಪಡೆದುಕೊಂಡಿದ್ದಾರೆ. ಈ ಮೂಲಕ ಇಂದಿನವರೆಗೆ ಒಟ್ಟು 2,824 (ಶೇ.65.9) ಮಂದಿ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News