ವ್ಯಕ್ತಿಗಳ ಮೂಲಕ ಶೌಚಾಲಯ ಸ್ವಚ್ಛಗೊಳಿಸಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ

Update: 2021-02-24 13:53 GMT

ಉಡುಪಿ, ಫೆ. 24: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಪದ್ದತಿಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಸಾರ್ವಜನಿಕರು ಉಡುಪಿ ನಗರಸಭೆಯಲ್ಲಿ ಲಭ್ಯವಿರುವ 6000 ಲೀಟರ್ ಸಾಮರ್ಥ್ಯದ 2 ಮತ್ತು 4000 ಲೀಟರ್ ಸಾಮರ್ಥ್ಯದ ಒಂದು ಸೆಸ್‌ಪೂಲ್ ವಾಹನ, 1 ಜೆಟ್ ಸಕ್ಕರ್ ಮತ್ತು 1 ಡಿಸಿಲ್ಟಿಂಗ್ ಮಷಿನ್‌ಗಳನ್ನು ಬಳಸಿ ಶೌಚಾಲಯವನ್ನು ಶುಚಿಗೊಳಿಸಬೇಕು.

ಯಾವುದೇ ಕಾರಣಕ್ಕೂ ಪೌರಕಾರ್ಮಿಕರು/ಸಫಾಯಿ ಕಾರ್ಮಿಕರು ಇತರ ಯಾವುದೇ ವ್ಯಕ್ತಿಯ ಮೂಲಕ ಶೌಚಾಲಯ ಶುಚಿಗೊಳಿಸುವುದು ಕಂಡುಬಂದಲ್ಲಿ ನೇರವಾಗಿ ಸಂಬಂಧಪಟ್ಟ ಇಲಾಖೆ/ಸಂಸ್ಥೆಗಳು, ಗುತ್ತಿಗೆ ಪಡೆದಿರುವ ಏಜೆನ್ಸಿಯವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News