ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ ಪ್ರಕರಣ: 8 ಮಂದಿ ಎಸ್ ಡಿ ಪಿಐ ಕಾರ್ಯಕರ್ತರ ಬಂಧನ

Update: 2021-02-25 07:15 GMT

ಅಲಪ್ಪುಳ: ಜಿಲ್ಲೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಸ್ ಡಿಪಿಐನ 8 ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬುಧವಾರ ರಾತ್ರಿ ಚೆರ್ಥಲಾ ಸಮೀಪದ ನಾಗಂಕುಲಂಗರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಬಳಿಕ 23ರ ವಯಸ್ಸಿನ ನಂದು ಎಂಬಾತನ ಮೇಲೆ ಎಸ್‍ಡಿಪಿಐ ಕಾರ್ಯಕರ್ತರು ತೀವ್ರ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಗುಂಪು ಘರ್ಷಣೆಯ ವೇಳೆ ಎಸ್‍ಡಿಪಿಐ ಹಾಗೂ ಆರ್ ಎಸ್ ಎಸ್ ಗೆ ಸೇರಿರುವ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಅಲಪ್ಪುಳ ಹಾಗೂ ಎರ್ನಾಕುಲಂನ ವಿವಿಧ ಆಸ್ಪತ್ರೆಗಳಲ್ಲಿ ಸೇರಿಸಲಾಗಿದೆ. ಆರ್ ಎಸ್ ಎಸ್ ಸಂಘಟನೆಗೆ ಸೇರಿದ ಓರ್ವ ಕಾರ್ಯಕರ್ತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಕೇರಳಕ್ಕೆ ಭೇಟಿ ನೀಡಿ ಕಾಸರಗೋಡಿನಿಂದ ತಿರುವನಂತಪುರಕ್ಕೆ ಬಿಜೆಪಿಯ ವಿಜಯ ಯಾತ್ರೆಗೆ ಚಾಲನೆ ನೀಡಿದ್ದನ್ನು ಪ್ರತಿಭಟಿಸಿ ಎಸ್ ಡಿಪಿಐ ಮೆರವಣಿಗೆ ಆಯೋಜಿಸಿದ ಬಳಿಕ ಈ ಪ್ರದೇಶದಲ್ಲಿ ಉದ್ವಿಗ್ನತೆ ನೆಲೆಸಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News