ವೈದ್ಯಕೀಯ ಪರೀಕ್ಷಾ ಅರ್ಜಿ ಶುಲ್ಕ ಹೆಚ್ಚಳಕ್ಕೆ ಸಿಎಫ್‌ಐ ಖಂಡನೆ

Update: 2021-02-26 16:53 GMT

ಮಂಗಳೂರು, ಫೆ.26: ವೈದ್ಯಕೀಯ ಸ್ನಾತಕೋತ್ತರ ಪದವೀಧರ ಪರೀಕ್ಷಾ-2021ರ ಅರ್ಜಿ ಶುಲ್ಕವನ್ನು ಹೆಚ್ಚಿಸಿರುವುದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಸರಕಾರದ ಅವೈಜ್ಞಾನಿಕ ಕ್ರಮಗಳಿಂದಾಗಿ ದೇಶದ ಆರ್ಥಿಕತೆ ನೆಲಕಚ್ಚಿದೆ. ಸರಕಾರವು ದಿನನಿತ್ಯ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿ, ಪೆಟ್ರೋಲ್- ಡೀಸಲ್ ಬೆಲೆಯನ್ನು ಹೆಚ್ಚಿಸಿದ ಹಾಗೆಯೇ, ಬೇರೆ-ಬೇರೆ ರೀತಿಯ ದಾರಿಗಳನ್ನು ಹುಡುಕಿ ಜನರ ಹಣವನ್ನು ಬೆಲೆ ಏರಿಕೆ, ತೆರಿಗೆ ಮತ್ತು ದಂಡದ ಹೆಸರಲ್ಲಿ ಲೂಟಿ ಹೊಡೆಯುತ್ತಿದೆ. ಇದರ ಮುಂದುವರಿದ ಭಾಗವಾಗಿ ವೈದ್ಯಕೀಯ ಸ್ನಾತಕೋತ್ತರ ಪದವೀಧರ ಪರೀಕ್ಷಾ ಅರ್ಜಿ ಶುಲ್ಕವನ್ನು ಸಹ ಹೆಚ್ಚಿಸಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ದೇಶದ ಜನ ಆರ್ಥಿಕವಾಗಿ ಸಾಕಷ್ಟು ಸಂಕಷ್ಟದಲ್ಲಿರುವಾಗ ಸರಕಾರದ ಈ ನಡೆಯು ವಿದ್ಯಾರ್ಥಿಗಳು ಮತ್ತು ಪೋಷಕರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ವರ್ಷ ವೈದ್ಯಕೀಯ ಸ್ನಾತಕೋತ್ತರ ಪದವೀಧರ ಪರೀಕ್ಷಾ ಅರ್ಜಿ ಶುಲ್ಕವು ಸಾಮಾನ್ಯ ವರ್ಗಕ್ಕೆ ರೂಪಾಯಿ 3,750 ಹಾಗೂ ಎಸ್ಸಿ/ಎಸ್ಟಿ ವರ್ಗಕ್ಕೆ 2,750 ರೂ. ನಿಗದಿಯಾಗಿತ್ತು. ಆದರೆ ಈ ಸಾಲಿನ ಪರೀಕ್ಷಾ ಅರ್ಜಿ ಶುಲ್ಕವು ಸಾಮಾನ್ಯ ವರ್ಗಕ್ಕೆ 5,015 ನಿಗದಿಪಡಿಸಲಾಗಿದೆ. ಸರಕಾರದ ಈ ಶುಲ್ಕ ಹೆಚ್ಚಳದ ಕ್ರಮವು ವಿದ್ಯಾರ್ಥಿ ವಿರೋಧಿಯಾಗಿದೆ. ತಕ್ಷಣ ಸರಕಾರ ವೈದ್ಯಕೀಯ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿ ಶುಲ್ಕ ಹೆಚ್ಚಳದ ಆದೇಶವನ್ನು ಹಿಂಪಡೆಯಬೇಕು ಎಂದು ಸಿಎಫ್‌ಐ ಮುಖಂಡ ಸ್ವದಕತ್ ಶಾಹ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News