'ಐಡಿಎಸ್' ವಿದ್ಯಾರ್ಥಿಗಳಿಂದ ಮಣಿಪಾಲದ ಹಸ್ತ ಶಿಲ್ಪ ಹರಿಟೇಜ್ ವಿಲೇಜ್ ಮ್ಯೂಸಿಯಂ ಭೇಟಿ

Update: 2021-02-26 17:40 GMT

ಮಂಗಳೂರು : ದಕ್ಷಿಣ ಕರ್ನಾಟಕದ ಕರಾವಳಿಯ (ಕೆನರಾದ ) ಸ್ಥಳೀಯ ವಾಸ್ತುಶಿಲ್ಪ ಮತ್ತು ಸಾಂಪ್ರದಾಯಿಕ ಒಳಾಂಗಣಗಳನ್ನು ಅರ್ಥ ಮಾಡಿಕೊಳ್ಳುವ ಶೈಕ್ಷಣಿಕ ಕಾರ್ಯಾಗಾರದ ಅಂಗವಾಗಿ ಇಂಡಿಯನ್ ಡಿಸೈನ್ ಸ್ಕೂಲ್ ನ ವಿದ್ಯಾರ್ಥಿಗಳು ಫೆ. 25ರಂದು ಮಣಿಪಾಲದ ಹಸ್ತಾ ಶಿಲ್ಪ ಹೆರಿಟೇಜ್ ವಿಲೇಜ್ ಮ್ಯೂಸಿಯಂ ನಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಪಾರಂಪರಿಕ ಜ್ಞಾನದ ಅಂಗವಾಗಿ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಿತ್ತು.

ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯ ಯಾವುದೇ ಒಳಾಂಗಣ ವಿನ್ಯಾಸ ಕಾಲೇಜು ತಮ್ಮ ವಿದ್ಯಾರ್ಥಿ ಗಳಿಗಾಗಿ ಪಾರಂಪರಿಕ ಪ್ರವಾಸವನ್ನು ನಡೆಸುತ್ತಿರುವುದು ಪ್ರಥಮ ಬಾರಿಗೆ ಹಮ್ಮಿಕೊಂಡಿದೆ.

ಹಸ್ತಾ ಶಿಲ್ಪಾ ಹೆರಿಟೇಜ್ ವಿಲೇಜ್ ವಿಶೇಷವಾದ ಬಯಲು ವಸ್ತುಸಂಗ್ರಹಾಲಯ ಮತ್ತು ಸಾಂಸ್ಕೃತಿಕ ಸಂಕೀರ್ಣವಾಗಿರುತ್ತದೆ. ಇದು ಸಾಂಪ್ರದಾಯಿಕ ಕಟ್ಟಡಗಳು ಮತ್ತು ಕಲೆ, ಕರಕುಶಲ ವಸ್ತುಗಳು ಮತ್ತು ಸೌಂದರ್ಯದ ಆಸಕ್ತಿಯ ಇತರ ಕಲಾಕೃತಿಗಳ ರೂಪದಲ್ಲಿ ರಾಷ್ಟ್ರದ ಸಾಂಸ್ಕೃತಿಕ ಸಂಪತ್ತನ್ನು ಪುನಃಸ್ಥಾಪಿಸಲು ಮತ್ತು ಸಂರಕ್ಷಿಸುವ ಉದ್ದೇಶದಿಂದ ರೂಪುಗೊಂಡಿದೆ. ನಿವೃತ್ತ ಬ್ಯಾಂಕ್ ಅಧಿಕಾರಿ ದಿವಂಗತ  ವಿಜಯನಾಥ್ ಶೆಣೈ (1934-2017) ಅವರ ಕಲ್ಪನೆಯೊಂದಿಗೆ ಅವರ ಸ್ವಂತ ಮನೆಯನ್ನು ಜನಾಂಗೀಯ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಿದ ಹೆರಿಟೇಜ್ ವಿಲೇಜ್ ಅನ್ನು ಹಸ್ತಾ ಶಿಲ್ಪಾ ಟ್ರಸ್ಟ್ ನಿರ್ವಹಿಸುತ್ತದೆ. ಕಳೆದ ಎರಡು ದಶಕಗಳಲ್ಲಿ, ಟ್ರಸ್ಟ್ ಅಪಾರ ವಾಸ್ತುಶಿಲ್ಪದ ಅಮೂಲ್ಯವಾದ  ರಚನೆಗಳನ್ನು ಮತ್ತು ಉತ್ತಮ ಕರಕುಶಲತೆಯ 26 ರಚನೆಗಳನ್ನು ಸ್ಥಳಾಂತರಿಸಿ ಪುನಃಸ್ಥಾಪಿಸಿರುವುದರೊಂದಿಗೆ ಮುಂದಿನ ಪೀಳಿಗೆಗೆ ಇದೊಂದು ಅಮೂಲ್ಯವಾದ ನಿಧಿಯಾಗಿ ಸಂರಕ್ಷಿಸಿದೆ.

ಹರಿಟೇಜ್ ವಿಲೇಜ್  ಭೇಟಿಯ ಪಾರಂಪರಿಕ ನಡಿಗೆಗಳು ಸಾಮಾನ್ಯವಾಗಿ ಎರಡು ಕವಲುಗಳ ಪ್ರವಾಸಗಳನ್ನು ಒಳಗೊಂಡಿರುತ್ತವೆ. ಉತ್ತರ ಭಾಗದ ಪ್ರಯಾಣ ಮತ್ತು ದಕ್ಷಿಣ ಭಾಗದ ಪ್ರಯಾಣ ವೆಂದು ವಿಂಗಡಿಸಬಹುದು ( ಸದರ್ನ್ ಟೂರ್). ಹಳ್ಳಿಯ ಒಂದು ಭಾಗವನ್ನು ಸಂದರ್ಶಿಸಲು 1.5 ಗಂಟೆಯ ಸಮಯ ಬೇಕಾಗುತ್ತದೆ. ಆದಾಗ್ಯೂ, ಐಡಿಎಸ್ ವಿದ್ಯಾರ್ಥಿಗಳಿಗೆ ಎರಡೂ ಪ್ರವಾಸಗಳನ್ನು ನಡೆಸಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಪ್ರವಾಸವು 4 ಗಂಟೆಗಳಿ ಗಿಂತ ಹೆಚ್ಚು ಕಾಲ ನಡೆಯಿತು.

ಪ್ರವಾಸವನ್ನು ಇನ್ನಷ್ಟು ವಿಶೇಷವಾಗಿಸಲು, ಟ್ರಸ್ಟ್ ಸದಸ್ಯರಲ್ಲಿ ಒಬ್ಬರಾದ ಹರೀಶ್ ಪೈ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು ಮತ್ತು ಪ್ರತಿ ರಚನೆಯ ಇತಿಹಾಸ, ಅದರ ಬಳಕೆ, ಪುನಃಸ್ಥಾಪನೆ ಪ್ರಕ್ರಿಯೆ ಮತ್ತು ಐತಿಹಾಸಿಕ ದಾಖಲಾತಿಗಳ ಮಾರ್ಗಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅವರಿಗೆ ನೀಡಿದ್ದರು. ನಿಯಮಿತ ಭೇಟಿಗಳ ಸಮಯದಲ್ಲಿ ಅಂತಹ ಆಳವಾದ ಮಾಹಿತಿಯನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಆದರೆ  ಹರೀಶ್  ಪೈ ಅವರು ಎಲ್ಲಾ ರಚನೆಗಳ ಪುನಃಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ವಿಜಯನಾಥ ಶೆಣೈ ಅವರೊಂದಿಗೆ ಇದನ್ನು ಮಾಡಿದ್ದಾರೆ. ಹರೀಶ್ ಪೈ ಅವರು ವಿದ್ಯಾರ್ಥಿಗಳೊಂದಿಗೆ ಆಸಕ್ತಿಯಿಂದ ಉತ್ಸಾಹದಿಂದ ಸಂವಾದ ಕಾರ್ಯಕ್ರಮ ಗಳನ್ನು ನಡೆಸಿದ್ದಾರೆ. ವಿದ್ಯಾರ್ಥಿ ಗಳ ಉತ್ಸಾಹ ಕಂಡು  ಅವರ ಮುಂದಿನ ಕಾರ್ಯಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವ ಬಗ್ಗೆ ಆಸಕ್ತಿ ತೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News