ಮತ್ತೊಮ್ಮೆ ಏಶ್ಯದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಮುಖೇಶ್ ಅಂಬಾನಿ

Update: 2021-02-26 18:25 GMT

ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮುಖೇಶ್ ಅಂಬಾನಿ ಮತ್ತೊಮ್ಮೆ ಏಶ್ಯದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಅಂಬಾನಿ ಅವರು ಸುಮಾರು 80 ಬಿಲಿಯನ್ ಡಾಲರ್ ನಿವ್ವಳ ಆಸ್ತಿ ಮೌಲ್ಯದೊಂದಿಗೆ ಚೀನಾದ ಝಾಂಗ್ ಶಾನ್ ಶಾನ್ ರನ್ನು ಹಿಂದಿಕ್ಕಿದ್ದಾರೆ.

ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಚೀನಾದ ಉದ್ಯಮಿ ಮೌಲ್ಯವು 76.6 ಬಿಲಿಯನ್ ಡಾಲರ್ ಆಗಿದೆ.

ಅಂಬಾನಿ ಕಳೆದ ಎರಡು ವರ್ಷಗಳಿಂದ ಏಶ್ಯಾದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿ.ನ ಜಾಕ್ ಮಾ ಅವರಿಂದ ಅಂಬಾನಿ ಅಗ್ರಸ್ಥಾನ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News