ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವವರ ದೊಡ್ಡ ವಿಭಾಗ ನರ್ಸಿಂಗ್ ಕ್ಷೇತ್ರ : ಶಿವಾನಂದ ಕಪಾಶಿ

Update: 2021-02-27 08:59 GMT

ಮಂಗಳೂರು, ಫೆ. 27:ವೈದ್ಯಕೀಯರಂಗದಲ್ಲಿ ಅತ್ಯಂತ ದೊಡ್ಡ ಸೇವಾ ವಿಭಾಗವಾಗಿ ನರ್ಸಿಂಗ್ ಪದವೀಧರರು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾನಿಲಯದ ಕುಲಸಚಿವ ಶಿವಾನಂದ ಕಪಾಶಿ ತಿಳಿಸಿದ್ದಾರೆ.

ಫಾದರ್ ಮುಲ್ಲರ್ ಚ್ಯಾರಿಟೇಬಲ್ ಸಂಸ್ಥೆಯ ಫಾದರ್ ಮುಲ್ಲರ್ ಸಭಾಂಗಣದಲ್ಲಿಂದು ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ 2021ನೆ ಸಾಲಿನ ಪದವಿ ಪ್ರಧಾನ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಆರೋಗ್ಯ ಕ್ಷೇತ್ರದ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಕಡಿಮೆ ಪ್ರಮಾಣದಲ್ಲಿದೆ. ಎಲ್ಲರಿಗೂ ಈ ಅವಕಾಶವನ್ನು ಪಡೆಯಲು ಸಾಧ್ಯವಾ ಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಾಕಷ್ಟು ವಿದ್ಯಾರ್ಥಿಗಳಿಗೆ ಅತ್ಯತ್ತಮ ಸೌಲಭ್ಯಗ ಳೊಂದಿಗೆ ಉತ್ತಮ ಆರೋಗ್ಯ ಶಿಕ್ಷಣ ವನ್ನು ನೀಡುವ ಮೂಲಕ  ಸಾಮಾಜಿಕ ನ್ಯಾಯ ನೀಡುವಲ್ಲಿ  ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಶಿವಾನಂದ ಕಾಪಾಶಿ ತಿಳಿಸಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷ ಹಾಗೂ ಬಿಷಪ್ ಅತೀ.ವಂ.ಡಾ.ಪೀಟರ್ ಪೌಲ್ ಸಲ್ದಾನ  ವಹಿಸಿ ನರ್ಸಿಂಗ್ ಪದವೀಧರರನ್ನು ಅಭಿನಂದಿಸಿ, ಶುಭ ಹಾರೈಸಿದ್ದಾರೆ.

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಂ.ರುಡ್ಫಾಲ್ ರವಿ ಡೇಸಾ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾ ಧಿಕಾರಿ ಅಜಿತ್ ಮಿನೇಜಸ್, ಫಾ.ಮು. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಜೆಸಿಂತಾ ಡಿ ಸೋಜ, ಫಾ.ಮು.ನರ್ಸಿಂಗ್ ಸ್ಕೂಲ್ ನ ಪ್ರಾಂಶುಪಾಲರಾದ ಜಾಸ್ಮಿನ್ ಸರಿತಾ ವಾಸ್ ಮೊದಲಾದ ವರು ಉಪಸ್ಥಿತರಿದ್ದರು.

ಇದೇ  ಸಂದರ್ಭದಲ್ಲಿ 260 ಪದವೀಧರರಿಗೆ (ನರ್ಸಿಂಗ್ ಡಿಪ್ಲೋಮಾ, ನರ್ಸಿಂಗ್ ಪದವೀಧರರಿಗೆ) ಪದವಿ ಪ್ರಧಾನ ಮಾಡಲಾಯಿತು. ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಸ್ವಾಗತಿಸಿದರು. ಪ್ರೀಯಾ ಪಿರೇರಾ, ವಿದ್ಯಾಮೋಹನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News