ಸ್ಟೇಟ್ಸ್‌ಮೆನ್ ಬದಲು ಸೇಲ್ಸ್‌ಮೆನ್ ಕೈಯಲ್ಲಿ ದೇಶದ ಆಡಳಿತ: ಎಸ್.ಕೆ.ಗೀತಾ

Update: 2021-02-27 11:30 GMT

ಉಡುಪಿ, ಫೆ. 27: ಇಂದು ನಮ್ಮ ದೇಶದಲ್ಲಿ ಆಡಳಿತ ನಡೆಸುತ್ತಿರುವ ಕೇಂದ್ರ ಸರಕಾರ ಬೃಹತ್ ಮಾರಾಟ ಮಂಡಳಿ ಎಂಬುದನ್ನು ಈ ಬಾರಿಯ ಬಜೆಟ್ ನಲ್ಲಿ ನಿರೂಪಿಸಿದೆ. ಹಲವು ದಶಕಗಳ ದುಡಿದು ಕಟ್ಟಿದ ಎಲ್ಲ ಸಾರ್ವಜನಿಕ ವಲಯಗಳ ಸಂಸ್ಥೆಗಳನ್ನು ಸರಕಾರ ಮಾರಾಟಕ್ಕೆ ಇಟ್ಟಿದೆ. ನಮ್ಮ ದೇಶವನ್ನು ಸ್ಟೇಟ್ಸ್‌ಮೆನ್ (ಮುತ್ಸದಿ) ಮುನ್ನಡೆಸುವ ಬದಲು ದುರಾದೃಷ್ಟ ಸೇಲ್ಸ್‌ಮೆನ್ ನಡೆಸುತ್ತಿದ್ದಾರೆ ಎಂದು ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟ ಹೈದರಾಬಾದ್ ಇದರ ಉಪಾಧ್ಯಕ್ಷೆ ಎಸ್.ಕೆ.ಗೀತಾ ಟೀಕಿಸಿದ್ದಾರೆ.

ವಿಮಾ ನೌಕರರ ಸಂಘ ಉಡುಪಿ ವಿಭಾಗದ 20ನೇ ವಿಭಾಗೀಯ ಮಹಿಳಾ ಸಮಾವೇಶವನ್ನು ಶನಿವಾರ ಉಡುಪಿಯ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಆರ್ಥಿಕ ಸಂಕಷ್ಟ ಉಂಟಾದಾಗ ಆ ದೇಶದ ಜನರ ಮೇಲೆ ನಿರಂತರ ದಾಳಿ ಗಳು ನಡೆಯುತ್ತವೆ. ಅಂತಹ ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ದಾಳಿಗಳಿಗೆ ಮೊದಲ ಬಲಿಪಶು ಹೆಣ್ಣ್ಣು ಆಗಿರುತ್ತಾಳೆ. ಯಾವ ದೇಶದಲ್ಲಿ ಪ್ರಜಾಸತ್ತತ್ಮಾಕ ಹಕ್ಕುಗಳ ಇರುವುದಿಲ್ಲವೋ ಅಲ್ಲಿ ಕಾರ್ಮಿಕ, ಮಹಿಳೆ ಯರ ಹಕ್ಕುಗಳನ್ನು ಕೂಡ ಮಾನ್ಯ ಮಾಡುವುದಿಲ್ಲ. ಆದುದರಿಂದ ಮಹಿಳಾ ಚಳವಳಿಗಳು ಇನ್ನಷ್ಟು ಗಟ್ಟಿ ಯಾಗಬೇಕಾಗಿದೆ ಎಂದರು.

ಇಂದು ದೇಶದಲ್ಲಿನ ಕಾರ್ಮಿಕರ ಹಕ್ಕುಗಳ ಮೇಲೆ ದಾಳಿ ಮಾಡಲಾಗುತ್ತಿದೆ. ತಮ್ಮ ಹಕ್ಕುಗಳಿಗೆ ಹೋರಾಡುವವರ ಹಾದಿಯನ್ನು ಸರಕಾರ ನಿರ್ಲಕ್ಷ್ಯ ಮಾಡುವ ಮತ್ತು ಹೋರಾಟಗಾರರನ್ನು ವಿವಿಧ ಹೆಸರಿನಲ್ಲಿ ಕರೆದು ನಗಣ್ಯ ಮಾಡುವ ಪ್ರಯತ್ನಗಳು ನಡೆಸುತ್ತಿವೆ. ವಿಭಿನ್ನ ದ್ವನಿಗಳಿಗೆ ಅವಕಾಶ ಕಲ್ಪಿಸುವ ಮತ್ತು ಅದನ್ನು ಆಲಿಸುವ ಕರ್ತವ್ಯ ಸರಕಾರಕ್ಕೆ ಇದೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದರೆ ಕಾರ್ಮಿಕರ ಹಕ್ಕುಗಳು ಉಳಿ ಯಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ಎಲ್‌ಐಸಿಯನ್ನು ಐಪಿಓಇನಿಂದ ರಕ್ಷಿಸುವುದು ಮತ್ತು ವಿಮಾ ಉದ್ದಿಮೆ ಯಲ್ಲಿ ವಿದೇಶ ನೇರ ಬಂಡವಾಳದ ಆಕ್ರಮಣವನ್ನು ತಡೆಯುವುದು ನಮ್ಮ ಮುಂದಿರುವ ಪ್ರಮುಖ ಸವಾಲು ಆಗಿದೆ. ಇಂದು ಸರಕಾರ ಯಾವುದೇ ಎಗ್ಗಿಲ್ಲದೆ ನೇರವಾಗಿ ಬ್ಯಾಂಕ್, ವಿಮಾ ಕಂಪೆನಿಗಳನ್ನು ಸಂಪೂರ್ಣ ಖಾಸಗೀ ಕರಣ ಮಾಡುವುದಾಗಿ ಹೇಳುತ್ತಿದೆ. ನಮ್ಮ ಹೋರಾಟ ಎಲ್‌ಐಸಿ ಉದ್ದಿಮೆ ಉಳಿಸುವುದು ಮಾತ್ರವಲ್ಲದೆ ಮುಂದಿನ ಪೀಳಿಗೆಗೆ ಸುಭದ್ರ ಬದುಕು ನಡೆಸಲು ಪ್ರಜಾತಂತ್ರ ವ್ಯವಸ್ಥೆ ಉಳಿಸುವುದು ಕೂಡ ಆಗಿದೆ ಎಂದು ಅವರು ತಿಳಿಸಿದರು.

ಎಷ್ಟೆ ಆರ್ಥಿಕವಾಗಿ ಸದೃಢವಾಗಿದ್ದರೂ ಬಹುಜನರ ಹಿತ ಕಾಪಾಡದಿದ್ದರೆ ದೇಶ ಉಳಿಸಲು ಸಾಧ್ಯವಿಲ್ಲ ಎಂಬುದನ್ನು ಕೊರೋನಾ ತೋರಿಸಿ ಕೊಟ್ಟಿದೆ. ಅಮೆರಿಕಾದ ಇಡೀ ಆರೋಗ್ಯ ವ್ಯವಸ್ಥೆ ಖಾಸಗಿವರ ಹಿಡಿತದಲ್ಲಿದ್ದ ಪರಿಣಾಮ ಅಲ್ಲಿ ಕೊರೋನಾದಿಂದ ಹೆಚ್ಚಿನ ಸಾವು ಸಂಭವಿಸಿದೆ ಎಂದ ಅವರು, ಭಾರತದಲ್ಲಿ ಕೊರೋನಾದಿಂದ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣ ಗಳು ತೀವ್ರವಾಗಿ ಹೆಚ್ಚಳ ಆಗಿವೆ ಎಂದರು.

ಅಧ್ಯಕ್ಷತೆಯನ್ನು ಸಂಘದ ಉಡುಪಿ ವಿಭಾಗದ ಅಧ್ಯಕ್ಷ ವಿಶ್ವನಾಥ್ ಕೆ. ವಹಿಸಿ ದ್ದರು. ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ.ಕುಂದರ್, ಕವಿತಾ ಎಸ್., ರಾಧಿಕಾ ಎಲ್.ಕಾಮತ್ ಉಪಸ್ಥಿತರಿದ್ದರು.

ಪೂರ್ಣಿಮಾ ಎಸ್.ನಾಯ್ಕ ಸ್ವಾಗತಿಸಿದರು. ಸಂಘದ ಮಹಿಳಾ ಸಂಚಾಲಕಿ ಪದ್ಮರೇಖ ಸಿ.ಆಚಾರ್ಯ ವಂದಿಸಿದರು. ರತ್ನಾ ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಸಮಾವೇಶದಲ್ಲಿ ಉಡುಪಿ, ದ.ಕ. ಮತ್ತು ಚಿಕ್ಕಮಗಳೂರು ಜಿಲ್ಲೆಯ ಜೀವ ವಿಮಾ ಕಚೇರಿಗಳಿಂದ ಸಂಘದ ಸದಸ್ಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News