ಉಳ್ಳಾಲ ಅಕ್ಕರೆಕೆರೆಯಲ್ಲಿ ಸಾರ್ವಜನಿಕ ಸಭೆ

Update: 2021-02-27 14:02 GMT

ಮಂಗಳೂರು, ಫೆ.27: ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ ಸದೃಢ ಕುಟುಂಬ ಸುಭದ್ರ ಸಮಾಜ ಎಂಬ ಘೋಷಣೆಯಡಿ ನಡೆಸಲಾಗುವ ರಾಷ್ಟ್ರೀಯ ಅಭಿಯಾನದಡಿ ಜಮಾಅತೆ ಇಸ್ಲಾಮಿ ಹಿಂದ್ ಅಕ್ಕರೆ ಕೆರೆ ವರ್ತುಲದ ವತಿಯಿಂದ ಸಾರ್ವಜನಿಕ ಸಭೆಯು ಉಳ್ಳಾಲ ಅಕ್ಕರೆಕೆರೆಯಲ್ಲಿ ಶುಕ್ರವಾರ ನಡೆಯಿತು.

ಪ್ರೊ.ಡಾ. ಮುಹಮ್ಮದ್ ಮುಬೀನ್ ಮಾತನಾಡಿ ಇಸ್ಲಾಂ ಕರುಣೆ, ತಾಳ್ಮೆ, ಸಹಾನುಭೂತಿಯ ಧರ್ಮವಾಗಿದೆ, ಈ ಧರ್ಮದ ಅನುಯಾಯಿ ಗಳಾದ ನಾವು ಇಂತಹ ಗುಣಗಳನ್ನು ಜೀವನದಲ್ಲಿ ಮೈಗೂಡಿಸಬೇಕು, ಕೋಮುವಾದ ಮತ್ತು ಉಗ್ರವಾದ ಇಡೀ ಸಮಾಜವನ್ನು ಕೊರೆಯುತ್ತಿದೆ, ಇದನ್ನು ಈ ಸಮಾಜದಿಂದ ಬೇರು ಸಮೇತ ಕಿತ್ತೊಗೆಯಬೇಕು ಎಂದರು.

ಕುದ್ರೋಳಿ ಇಸ್ಲಾಮಿಯಾ ಮದ್ರಸದ ಮುಖ್ಯ ಅಧ್ಯಾಪಕ ಮೌಲಾನಾ ಅಬ್ದುಲ್ ಲತೀಫ್ ಆಲಿಯಾ ಮಾತನಾಡಿ ಇಸ್ಲಾಂ ಧರ್ಮವು ಕುಟುಂಬ ಸಂಬಂಧಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದೆ. ತಂದೆ ತಾಯಿಯರ ಶಾಪದಿಂದ ಮುಕ್ತವಾದರೆ ಮಾತ್ರ ಒಂದು ಕುಟುಂಬವು ಸುದೃಢವಾಗಲು ಸಾಧ್ಯ ಎಂದರು.

ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲದ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಮ್ ಪ್ರಾಸ್ತವಿಕವಾಗಿ ಮಾತನಾಡಿದರು. ಅಕ್ಕರೆಕೆರೆ ವರ್ತುಲದ ಸಂಚಾಲಕ ಉಮ್ಮರ್ ಟಿ. ಉಪಸ್ಥಿತರಿದ್ದರು. ಮುಝಮ್ಮಿಲ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News