ಮಾ.2-5: ಮಾಡನ್ನೂರು ನೂರುಲ್ ಹುದಾ ಅಕಾಡಮಿಯಿಂದ ಮಜ್ಲಿಸುನ್ನೂರ್

Update: 2021-02-27 14:06 GMT

ಪುತ್ತೂರು: ಸಮನ್ವಯ ಶಿಕ್ಷಣ ರಂಗದಲ್ಲಿ ಕ್ರಿಯಾಶೀಲವಾಗಿರುವ ಪುತ್ತೂರು ತಾಲೂಕಿನ ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿಯು 5 ವರ್ಷವನ್ನು ಪೂರೈಸಿದ್ದು, ಈ ಹಿನ್ನಲೆಯಲ್ಲಿ `ಸಮರಸದ ಪಂಚವರ್ಷಗಳು' ದ್ಯೇಯವಾಕ್ಯದೊಂದಿಗೆ ಮಾ.2ರಿಂದ 5ರ ತನಕ ಕಾಲೇಜು ಮೈದಾನದಲ್ಲಿ ನೂರುಲ್ ಹುದಾ ಪ್ರಭಾಷಣ ಹಾಗೂ ಮಜ್ಲಿಸುನ್ನೂರ್ ಮಹಾಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಕೆ.ಯು. ಖಲೀಲ್ ರಹ್ಮಾನ್ ಅರ್ಶದಿ ಕೋಲ್ಪೆ ತಿಳಿಸಿದ್ದಾರೆ.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾ.2ರಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಿರಾ ಅಬ್ದುಲ್ ಖಾದರ್ ಹಾಜಿ ಧ್ವಜಾರೋಹಣ ನಡೆಸಲಿದ್ದಾರೆ. ಸಂಸ್ಥೆಯ ಗೌರವ ಅಧ್ಯಕ್ಷ ಸಯ್ಯದ್ ಕೆ.ಎಸ್.ಅಲಿ ತಂಙಳ್ ಕುಂಬೋಳ್ ದುವಾ ನಡೆಸಲಿದ್ದಾರೆ. ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಫಿಲ್ ಅಹ್ಮದ್ ಕಬೀರ್ ಬಾಖವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಸಯ್ಯದ್ ಅಕ್ರಮ್ ಅಲೀ ತಂಙಳ್ ರಹ್ಮಾನಿ, ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಪುತ್ತೂರು ಶಾಸಕ ಸಂಜೀವ ಮಠಂದೂರು ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಮಾ.3ರಂದು ಸಂಸ್ಥೆಯ ಉಪಪ್ರಾಂಶುಪಾಲ ಅಸ್ಸಯ್ಯದ್ ಬರ್ಹಾನ್ ಅಲೀ ಅಲ್ ಬುಖಾರಿ ದುವಾ ನೆರವೇರಿಸಲಿದ್ದಾರೆ. ಸ್ವಾಗತ ಸಮಿತಿ ಕನ್ವೀನರ್ ಅಬ್ದುಲ್ ಖಾದರ್ ಬಯಂಬಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಸ್ತ ಮುಶಾವರದ ಸದಸ್ಯ ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉದ್ಘಾಟಿಸಲಿದ್ದಾರೆ. ಕಮ್ಮನಮ್ ನಿಝಾಮುದ್ದೀನ್ ಅಲ್ ಅಝ್ಹರಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. 

ಮಾ.4ರಂದು ದ.ಕ.ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್ ಅಧ್ಯಕ್ಷ ಸಯ್ಯದ್ ಅಮೀರ್ ತಂಙಲ್ ಕೀನ್ಯ ದುವಾ ನೆರವೇರಿಸಲಿದ್ದಾರೆ. ಮಸೀದಿ ಕಮಿಟಿ ಅಧ್ಯಕ್ಷ ಕೆ.ಕೆ. ಇಬ್ರಾಹಿಂ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ. ಸಮಸ್ತ ಮುಶಾವರದ ಅಧ್ಯಕ್ಷ ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಉದ್ಘಾಟಿಸಲಿದ್ದಾರೆ. ರಹ್ಮತುಲ್ಲ ಖಾಸಿಮಿ ಮುತ್ತೇಡಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಸಿ.ಕೆ.ಕೆ. ಮಣಿಯೂರ್, ಮೌಲಾನಾ ರಫೀಕ್ ಹುದವಿ ಕೊಳಾರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮಾ.5ರಂದು ಸಮಸ್ತ ಕೇಂದ್ರ ಮುಶಾವರದ ಕೋಶಾಧಿಕಾರಿ ಶೈಖುನಾ ಚೇಲಕ್ಕಾಡ್ ಉಸ್ತಾದ್ ನೇತೃತ್ವದಲ್ಲಿ ಮಜ್ಲಿಸುನ್ನೂರ್ ನಡೆಯಲಿದೆ. ಸಯ್ಯದ್ ಜುನೈದ್ ಜಿಫ್ರಿ ತಂಙಳ್ ದುವಾ ನೆರವೇರಿಸಲಿದ್ದಾರೆ. ಸಂಸ್ಥೆಯ ಕೋಶಾಧಿಕಾರಿ ಇಸ್ಮಾಯಿಲ್ ಹಾಜಿ ನೆಕ್ಕರೆ ಅಧ್ಯಕ್ಷತೆ ವಹಿಸಲಿ ದ್ದಾರೆ. ಸಮಸ್ತ ಕೇಂದ್ರ ಮುಶಾವರದ ಉಪಾಧ್ಯಕ್ಷ ಯು.ಎಂ. ಅಬ್ದುಲ್ ರಹ್ಮಾನ್ ಮೌಲವಿ ಉದ್ಘಾಟಿಸಲಿದ್ದಾರೆ. ಅಡ್ವ ಹನೀಫ್ ಹುದವಿ ದೇಲಂಪಾಡಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಹುಸೈನ್ ತಂಙಳ್ ಮಾಸ್ತಿಕುಂಡು, ಸದಕತುಲ್ಲಾ ಫೈಝಿ, ಸಯ್ಯದ್ ಅಫ್‍ಹಂ ತಂಙಳ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್, ಕಾರ್ಯದರ್ಶಿ ಹಿರಾ ಅಬ್ದುಲ್ ಖಾದರ್ ಹಾಜಿ, ಸಂಘಟನಾ ಕಾರ್ಯದರ್ಶಿ ಎಂ.ಡಿ. ಹಸೈನಾರ್, ಕಾರ್ಯದರ್ಶಿ ಸಿ.ಎಚ್. ಅಝೀಝ್ ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News