ಯೇನೆಪೋಯದಲ್ಲಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ

Update: 2021-02-27 14:41 GMT

ಕೊಣಾಜೆ : ಯೇನೆಪೋಯ ವಿಶ್ವವಿದ್ಯಾಲಯ (ಪರಿಗಣಿಸಲ್ಪಟ್ಟ) ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರ ಎಂಬ ವಿಷಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣವು ಶನಿವಾರ ನಡೆಯಿತು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ  ಭಾಗವಹಿಸಿ ಮಾತನಾಡಿದ ಮುಂಬಾಯಿ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್‍ನ ವೆಂಕಟರಮನ್ ರಾಮಚಂದ್ರನ್ ಮಾತನಾಡುತ್ತಾ ಪ್ರಸ್ತುತ ವಿಷಯಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಯೊಗದ ಅಗತ್ಯತೆಯನ್ನು ವಿವರಿಸಿದರು.

ಇಂಡಿಯಾನ್ ಇಸ್ಟಿಟ್ಟೂಟ್ ಆಫ್ ಸೈನ್ಸ್ ಬೆಂಗಳೂರು ಇದರ ವೈದ್ಯರಾದ ಪ್ರೊ. ಗುರುರೋತಯೂರ್ ರಾಷ್ಟ್ರೀಯ ವಿಚಾರ ಸಂಕಿರಣದ  ದಿಕ್ಸೂಚಿ ಭಾಷಣ ಮಾಡಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಮತ್ತು ಕೌಶಲ್ಯ ಆಧಾರಿತ ಶಿಕ್ಷಣದೊಂದಿಗೆ ಹೊಸತಲೆಮಾರಿನ ಪದವೀದರರನ್ನು ಸಶಕ್ತಗೊಳಿಸಬೇಕು ಮತ್ತು ಮಕ್ಕಳ ಜ್ಞಾನದ ಮಟ್ಟ ಶಕ್ತಿ ಸಾಮಥ್ರ್ಯದಿಂದಾಗಿ ಕಲಿಕೆಯಲ್ಲಿನ ಅಂತರವನ್ನು ಕಡಿಮೆಗೊಳಿಸಲು ಶಿಕ್ಷಣ ನೀತಿ ಮತ್ತು ಶಿಕ್ಷಕರ ತರಬೇತಿಯ ಅಗತ್ಯ ಇದೆ ಎಂದರು.

ಯೆನಪೋಯ ವಿವಿಯ ಸಹ ಕುಲಪತಿ ಡಾ. ಎಂ. ವಿಜಯಕುಮಾರ್ ಅಧ್ಯಕ್ಷೀಯ ಭಾಷಣ ಮಾಡಿ, ಮನೋವೃತ್ತಿ ಕೌಶಲ್ಯ ಜ್ಞಾನವ ಪ್ರಸ್ತುತತೆ ಯೊಂದಿಗೆ ಸಾಮಾನ್ಯಕರಣದ ಪ್ರವೃತ್ತಿಯ ಅಗತ್ಯತೆಯನ್ನು ವಿವರಿಸಿದರು. ಡಾ. ಕೆ.ಗಂಗಾಧರ್ ಸೋಮಯಾಜಿ, ಡಾ.ರೇಖಾ ಪಿ.ಡಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಮತ್ತು ಸಂಶೋಧಕರು ವಿಚಾರ ಮಂಡನೆ ಮಾಡಿದರು. ವಿಚಾರ ಸಂಕಿರಣದಲ್ಲಿ  ಆನ್‍ಲೈನ್ ಮೂಲಕ ವಿದೇಶ ಮತ್ತು ಭಾರತದ ವಿವಿಧ ಭಾಗಗಳಿಂದ 150 ಕ್ಕೂ ಅಧಿಕ ಮಂದಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News