ಕಾಸರಗೋಡು : ಮಾ.2ರಂದು ಇಂಧನ ಬೆಲೆ ಏರಿಕೆ ವಿರೋಧಿಸಿ ಮುಷ್ಕರ

Update: 2021-02-27 16:38 GMT

ಕಾಸರಗೋಡು : ಇಂಧನ ಬೆಲೆ ಏರಿಕೆಯನ್ನು ಪ್ರತಿಭಟಿಸಿ ಮಾರ್ಚ್ 2 ರಂದು ಕೇರಳದಲ್ಲಿ ವಾಹನ ಮುಷ್ಕರ ನಡೆಯಲಿದೆ. ವಾಹನ ಮಾಲಕರ ಹಾಗೂ ಕಾರ್ಮಿಕರ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿದೆ.

ಸಿಐಟಿಯು, ಐಎನ್ ಟಿಯುಸಿ , ಎಐಟಿಯುಸಿ  ಮೊದಲಾದ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ  ಮುಷ್ಕರ ನಡೆಯಲಿದೆ. ಮಾರ್ಚ್ ಒಂದರಂದು  ಪ್ರಮುಖ ಕೇಂದ್ರಗಳಲ್ಲಿ  ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆ  ಹಿನ್ನಲೆಯಲ್ಲಿ ಕೇಂದ್ರ ಸರಕಾರ ಮತ್ತು  ತೈಲ ಕಂಪೆನಿಗಳ ವಿರುದ್ಧ  ಜನರಿಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಲಿದೆ. ಮುಷ್ಕರ ಕ್ಕೆ  ಖಾಸಗಿ ವಾಹನ ಮಾಲಕರು ಬೆಂಬಲ ನೀಡಬೇಕು . ಪೆಟ್ರೋಲ್  ಡೀಸೆಲ್  ಬೆಲೆ ಏರಿಕೆ ಎಲ್ಲಾ ವಲಯಗಳ ಮೇಲೆ ಪರಿಣಾಮ ಬೀರಿದ್ದು , ಮುಷ್ಕರದಲ್ಲಿ ಬಸ್ಸು ಸೇರಿದಂತೆ ಎಲ್ಲಾ ವಾಹನಗಳು  ಸಂಚಾರ ಸ್ಥಗಿತಗೊಳಿಸಲಿದೆ ಎಂದು ಮೋಟಾರು ಉದ್ಯಮ ಸಂರಕ್ಷಣಾ  ಸಮಿತಿ ಮುಖಂಡರು  ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಗಿರಿಕೃಷ್ಣನ್, ಶರೀಫ್ ಕೊಡುವಂಜಿ ,  ಕೆ . ಗಿರೀಶ್ , ಪಿ . ಎ  ಮುಹಮ್ಮದ್ ಕು೦ಞ ಮೊದಲಾದವರು ಉಪಸ್ಥಿತರಿದ್ದರು   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News