ಅಸ್ಸಾಂ: ಚುನಾವಣೆಗೂ ಮುಂಚೆ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡ ಪ್ರಮುಖ ಪಕ್ಷ

Update: 2021-02-27 18:05 GMT

ಗುವಾಹಟಿ: ಮುಂದಿನ ತಿಂಗಳು ಅಸ್ಸಾಂನಲ್ಲಿ ನಡೆಯುವ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ಉತ್ತೇಜನ ನೀಡುವಂತೆ, ಬೊಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಶನಿವಾರ ಆಡಳಿತಾರೂಢ ಬಿಜೆಪಿ ನೇತೃತ್ವದ ಮೈತ್ರಿಕೂಟ ತೊರೆದು ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಸೇರುವುದಾಗಿ ಘೋಷಿಸಿದೆ.

"ಶಾಂತಿ, ಐಕ್ಯತೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಲು ಮತ್ತು ಅಸ್ಸಾಂನಲ್ಲಿ ಭ್ರಷ್ಟಾಚಾರದಿಂದ ಮುಕ್ತವಾದ ಸ್ಥಿರವಾದ ಸರ್ಕಾರವನ್ನು ತರಲು, ಬೊಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) 'ಮಹಾಜತ್' ನೊಂದಿಗೆ ಕೈಜೋಡಿಸಲು ನಿರ್ಧರಿಸಿದೆ. ಬಿಪಿಎಫ್ ಇನ್ನು ಮುಂದೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಪಿಎಫ್ 'ಮಹಾಜತ್' ನೊಂದಿಗೆ ಕೆಲಸ ಮಾಡುತ್ತದೆ" ಎಂದು ಬಿಪಿಎಫ್ ಮುಖಂಡ ಹಗ್ರಾಮ ಮೊಹಿಲರಿ ಫೇಸ್‌ಬುಕ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2005ರಲ್ಲಿ ಅಸ್ಸಾಂನಲ್ಲಿ ರಚನೆಯಾದ ಕೊಕ್ರಜಾರ್ ಮೂಲದ ಬಿಪಿಎಫ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 126 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದು ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿತ್ತು.

ರಾಜ್ಯದ ಸರ್ಬಾನಂದ ಸೋನೊವಾಲ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಮೂವರು ಮಂತ್ರಿಗಳನ್ನು ಹೊಂದಿರುವ ಬಿಪಿಎಫ್, ಡಿಸೆಂಬರ್‌ನಲ್ಲಿ ನಡೆದ ಬೋಡೊಲ್ಯಾಂಡ್ ಪ್ರಾದೇಶಿಕ ಮಂಡಳಿ(ಬಿಟಿಸಿ)ಚುನಾವಣೆಯ 40 ಸದಸ್ಯರ ಮಂಡಳಿಯಲ್ಲಿ 17 ಸ್ಥಾನಗಳನ್ನು ಜಯಿಸಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News