ಚತ್ತೀಸ್‌ಗಢದಲ್ಲಿ 10 ತಿಂಗಳಲ್ಲಿ 141 ರೈತರು ಆತ್ಮಹತ್ಯೆಗೆ ಶರಣು: ವಿಧಾನ ಸಭೆಗೆ ಮಾಹಿತಿ ನೀಡಿದ ರಾಜ್ಯ ಸರಕಾರ

Update: 2021-02-27 17:05 GMT

ರಾಯಪುರ, ಫೆ. 27: 2020 ಎಪ್ರಿಲ್ 1ರಿಂದ 2021 ಫೆಬ್ರವರಿ 1ರ ನಡುವಿನ 10 ತಿಂಗಳ ಅವಧಿಯಲ್ಲಿ 141ಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಚತ್ತೀಸ್‌ಗಢ ಸರಕಾರ ಶುಕ್ರವಾರ ವಿಧಾನ ಸಭೆಗೆ ತಿಳಿಸಿದೆ.

ರೈತರ ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸುವಂತೆ ಹಾಗೂ ಮೃತಪಟ್ಟ ರೈತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಪ್ರತಿಪಕ್ಷ ಬಿಜೆಪಿ ಕೋರಿರುವುದರಿಂದ ಸದನದಲ್ಲಿ ರೈತರ ಆತ್ಮಹತ್ಯೆ ವಿಚಾರ ಕೋಲಾಹಲ ಸೃಷ್ಟಿಸಿತು.

ಪ್ರಶ್ನೋತ್ತರ ವೇಳೆ ಪ್ರತಿಪಕ್ಷದ ನಾಯಕರ ಧರ್ಮಲಾಲ್ ಕೌಶಿಕ್ ಈ ಪ್ರಶ್ನೆ ಎತ್ತಿದರು. ರಾಜ್ಯದಲ್ಲಿ 2020 ಎಪ್ರಿಲ್ 1ರಿಂದ 2021 ಫೆಬ್ರವರಿ 1ರ ವರೆಗೆ ಎಷ್ಟು ಮಂದಿ ರೈತರು ಆತ್ಮಹತ್ಯೆ ಶರಣಾಗಿದ್ದಾರೆ ಹಾಗೂ ಈ ಆತ್ಮಹತ್ಯೆಗೆ ಕಾರಣ ತಿಳಿಸುವಂತೆ ಅವರು ಕೋರಿದ್ದರು. ಈ ಪ್ರಕರಣಗಳಿಗೆ ಸಂಬಂಧಿಸಿ ಕೈಗೊಂಡ ಕ್ರಮಗಳು ಹಾಗೂ ಮೃತಪಟ್ಟ ರೈತರ ಕುಟುಂಬಕ್ಕೆ ನೀಡಲಾದ ಪರಿಹಾರದ ಬಗ್ಗೆ ಕೂಡ ಅವರು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಖಾತೆಯ ಸಹಾಯಕ ಸಚಿವ ರವೀಂದ್ರ ಚೌಬೆ, ಈ ಅವಧಿಯಲ್ಲಿ 141 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News