×
Ad

ಐಗಾ ಮುಡಿಗೆ ಅಡಿಲೇಡ್ ಕಿರೀಟ

Update: 2021-02-28 00:10 IST
 ಐಗಾ  ಸ್ವಾಟೆಕ್

ಅಡಿಲೇಡ್ (ಆಸ್ಟ್ರೇಲಿಯ: ಫ್ರೆಂಚ್ ಓಪನ್ ಚಾಂಪಿಯನ್ ಐಗಾ ಸ್ವಾಟೆಕ್ ವಿಶ್ವದ 12ನೇ ಕ್ರಮಾಂಕದ ಬೆಲಿಂಡಾ ಬೆನ್ಸಿಕ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಅಡಿಲೇಡ್ ಇಂಟರ್‌ನ್ಯಾಶನಲ್ ಪ್ರಶಸ್ತಿಯನ್ನು ಶನಿವಾರ ಗೆದ್ದುಕೊಂಡಿದ್ದಾರೆ.

19ರ ಹರೆಯದ ಸ್ವಾಟೆಕ್ ಅವರು ಬೆಲಿಂಡಾ ಬೆನ್ಸಿಕ್‌ರನ್ನು 6-2, 6-2 ಅಂತರದಿಂದ ಮಣಿಸಿ ತನ್ನ ವೃತ್ತಿ ಜೀವನದ ಎರಡನೇ ಪ್ರಶಸ್ತಿಯನ್ನು ಪಡೆದರು.

 ಕಳೆದ ವರ್ಷ ರೋಲ್ಯಾಂಡ್ ಗ್ಯಾರೊಸ್‌ನಲ್ಲಿ ನಡೆದ ಫೈನಲ್‌ನಲ್ಲಿ ವಿಶ್ವದ ಆರನೇ ಕ್ರಮಾಂಕದ ಸೋಫಿಯಾ ಕೆನಿನ್‌ರನ್ನು ಮಣಿಸಿ ಫ್ರೆಂಚ್ ಓಪನ್ ಕಿರೀಟವನ್ನು ಧರಿಸಿದ್ದರು.

ಸ್ವಾಟೆಕ್ ಬೆನ್ಸಿಕ್ ವಿರುದ್ಧ ಬಲಿಷ್ಠ ಆರಂಭ ನೀಡಿದರು. ತನ್ನ ಸ್ವಿಸ್ ಎದುರಾಳಿಯನ್ನು ಪ್ರತಿ ಸೆಟ್‌ನಲ್ಲೂ ಹಿಂದಕ್ಕೆ ತಳ್ಳಿ ಸುಲಭದ ಗೆಲುವು ಸಾಧಿಸಿದರು. ಶುಕ್ರವಾರ ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಕೊಕೊ ಗೌಫ್‌ರನ್ನು ಮಣಿಸಲು ಬೆನ್ಸಿಕ್‌ಸುಮಾರು ಮೂರು ಗಂಟೆಗಳ ಕಾಲ ಹೋರಾಟ ನಡೆಸಿದ್ದರು. ಶನಿವಾರದ ಫೈನಲ್‌ನಲ್ಲೂ ಅವರ ಆರಂಭ ಚೆನ್ನಾಗಿತ್ತು. ಸ್ವಾಟೆಕ್ ಈ ಗೆಲುವಿನ ಪರಿಣಾಮವಾಗಿ ರ್ಯಾಂಕಿಂಗ್ಸ್‌ನಲ್ಲಿ 15ನೇ ಸ್ಥಾನ ಪಡೆಯಲಿದ್ದಾರೆ. ಇದು ಅವರು ಮೊದಲ ಹಾರ್ಡ್‌ಕೋರ್ಟ್ ಪ್ರಶಸ್ತಿ ಆಗಿದೆ. 2020ರಲ್ಲಿ ಬೆನ್ಸಿಕ್ ಗಾಯದ ಸಮಸ್ಯೆ ಎದುರಿಸಿದ್ದರು. ತನ್ನ 11ನೇ ಫೈನಲ್‌ನಲ್ಲಿ ಬೆನ್ಸಿ ಆಡಿದ್ದರು. 12 ತಿಂಗಳ ಅವಧಿಯಲ್ಲಿ ಇದು ಅವರ ಮೊದಲ ಪಂದ್ಯವಾಗಿತ್ತು. ಮಹಿಳಾ ಡಬಲ್ಸ್ ಫೈನಲ್‌ನಲ್ಲಿ ಚಿಲಿ-ಯುಎಸ್ ಜೋಡಿ ಅಲೆಕ್ಸಾ ಗೌರಾಚಿ ಮತ್ತು ದೇಸಿರೆ ಕ್ರಾವ್ಜಿಕ್ ಅವರು ಅಮೆರಿಕದ ಹೇಲಿ ಕಾರ್ಟರ್ ಮತ್ತು ಬ್ರೆಝಿಲ್‌ನ ಲೂಯಿಸಾ ಸ್ಟೆಫಾನಿಯನ್ನು 6-7 (4/7), 6-4, 10-3 ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಬಾಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News