×
Ad

ಮೊಟೆರಾ ಪಿಚ್ ಐಸಿಸಿ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳುವ ಸಾಧ್ಯತೆ

Update: 2021-02-28 00:17 IST

ಅಹಮದಾಬಾದ್,ಫೆ.27: ಡೇ-ನೈಟ್ ಟೆಸ್ಟ್ ಎರಡು ದಿನಗಳಲ್ಲಿ ಮುಗಿದ ನಂತರ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಗುಣಮಟ್ಟದ ಬಗ್ಗೆ ವ್ಯಾಪಕವಾಗಿ ಟೀಕೆ ವ್ಯಕ್ತವಾಗಿದ್ದರೂ, ಅಂತಿಮ ಪಂದ್ಯಕ್ಕೆ ಬ್ಯಾಟಿಂಗ್ ಸ್ನೇಹಿಯಾಗಿಸುವ ಪ್ರಯತ್ನ ನಡೆದಿರುವ ಹಿನ್ನೆಲೆಯಲ್ಲಿ ಐಸಿಸಿ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇಲ್ಲ.

 ಇಂಗ್ಲೆಂಡ್ ವಿರುದ್ಧದ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಮೇಲುಗೈ ಸಾಧಿಸಿದೆ. ಜೂನ್ 18 ರಿಂದ 22 ರವರೆಗೆ ಲಾರ್ಡ್ಸ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಭಾರತ ಅಂತಿಮ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸಬೇಕಾಗಿದೆ. ಅಂತಿಮ ಪಂದ್ಯಕ್ಕೆ ಬ್ಯಾಟಿಂಗ್ ಸ್ನೇಹಿ ಪಿಚ್ ಸಿದ್ಧಪಡಿಸಲಾಗಿದೆ. ಮಾರ್ಚ್ 4ರಿಂದ 8ರ ತನಕ ನಡೆಯಲಿರುವ ಟೆಸ್ಟ್‌ನಲ್ಲಿ ಹೆಚ್ಚಿನಸ್ಕೋರ್‌ನ್ನು ನಿರೀಕ್ಷಿಸಬಹುದು ಎಂದು ಬಿಸಿಸಿಐನ ಹಿರಿಯ ಅಧಿಕಾರಿ ಯೊಬ್ಬರು ಪಿಚ್ ಪರಿಸ್ಥಿತಿ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

  ಐಪಿಎಲ್ ಮತ್ತು ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ಪ್ರಮುಖ ಪಂದ್ಯಗಳನ್ನು ಇಲ್ಲಿ ಆಯೋಜಿಸುವ ನಿರೀಕ್ಷೆಯಿದೆ. ಅಂತಿಮ ಟೆಸ್ಟ್ ಮುಗಿಯಲಿ ಮತ್ತು ನಂತರ ಪಂದ್ಯದ ರೆಫರಿ ಜಾವಗಲ್ ಶ್ರೀನಾಥ್ ಅವರ ವರದಿಯನ್ನು ಆಧರಿಸಿ ಐಸಿಸಿ ಪಿಚ್ ಬಗ್ಗೆ ತನ್ನ ಕ್ರಮವನ್ನು ನಿರ್ಧರಿಸುತ್ತದೆ. ಈಗಿನಂತೆ, ಇಂಗ್ಲೆಂಡ್ ತಂಡವು ಯಾವುದೇ ಅಧಿಕೃತ ದೂರು ನೀಡಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಒಂದೇ ಸ್ಥಳದಲ್ಲಿ ಒಂದು ಉತ್ತಮ ಮತ್ತು ಕೆಟ್ಟ ಪಿಚ್ ಇದ್ದರೆ, ಐಸಿಸಿ ಯಾವುದೇ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿಲ್ಲ. ಭಾರತವು 3-1 ಅಂತರದಿಂದ ಸರಣಿ ವಶಪಡಿಸಿಕೊಳ್ಳಲು ನೋಡುತ್ತಿದೆ. ಈ ಕಾರಣದಿಂದಾಗಿ ಫಲಿತಾಂಶ ಆಧಾರಿತ ಟರ್ನರ್ ಅಗತ್ಯವಿರುವುದಿಲ್ಲ ಏಕೆಂದರೆ ಡ್ರಾ ಭಾರತದ ಉದ್ದೇಶಕ್ಕೆ ಸಾಕಾಗುತ್ತದೆ. ವೈಯಕ್ತಿಕ ಕಾರಣಗಳಿಂದಾಗಿ ಜಸ್‌ಪ್ರೀತ್ ಬುಮ್ರಾ ಅವರನ್ನು ತಂಡದಿಂದ ಬಿಡುಗಡೆ ಮಾಡಿದ ನಂತರ ಮುಂದಿನ ಟೆಸ್ಟ್ ತಂಡದ ಸಂಯೋಜನೆಯು ಆಸಕ್ತಿದಾಯಕವಾಗಿದೆ.

  ಇಶಾಂತ್ ಶರ್ಮಾ ಅವರ ಹೊಸ ಬಾಲ್ ಪಾಲುದಾರನಾಗಿ ಉಮೇಶ್ ಯಾದವ್ ಅವರಿಗಿಂತ ಮುಹಮ್ಮದ್ ಸಿರಾಜ್ ಅವಕಾಶವನ್ನು ಪಡೆಯುವ ಸಾಧ್ಯತೆ ಇದೆ. ಮೂವರೂ ಸ್ಪಿನ್ನರ್‌ಗಳು ಸ್ವಯಂಚಾಲಿತವಾಗಿ ಪಿಕ್ಸ್ ಆಗುವ ಸಾಧ್ಯತೆಯಿದೆ.

 ಮೊದಲ ಟೆಸ್ಟ್ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ವಾಶಿಂಗ್ಟನ್ ಸುಂದರ್ ನೀಡಿರುವ ಬ್ಯಾಟಿಂಗ್ ಪ್ರದರ್ಶನ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News